ಹೈಕೋರ್ಟ್ ಛೀಮಾರಿ

7

ಹೈಕೋರ್ಟ್ ಛೀಮಾರಿ

Published:
Updated:

ನವದೆಹಲಿ (ಪಿಟಿಐ): ಹಿರಿಯ ಅಧಿಕಾರಿಯೊಬ್ಬರನ್ನು ನಿವೃತ್ತಿಯ ಬಳಿಕ ಒಂದು ರೂಪಾಯಿ ವೇತನದಂತೆ ದುಡಿಸಿಕೊಂಡ ದೆಹಲಿ ಸರ್ಕಾರದ  ನಡವಳಿಕೆಗೆ ದೆಹಲಿ ಹೈಕೋರ್ಟ್ ಸೋಮವಾರ ಛೀಮಾರಿ ಹಾಕಿದೆ.ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕರಾದ ಜೆ. ಎಸ್. ಖಾತ್ರಿ ಅವರನ್ನು ನಿವೃತ್ತಿ ಬಳಿಕ ಒಂದು ರೂಪಾಯಿ ವೇತನಕ್ಕೆ ದುಡಿಸಿಕೊಂಡಿರುವುದು ಅತ್ಯಂತ ಹೀನಾಯ ಕೆಲಸ ಎಂದಿರುವ  ನ್ಯಾಯ ಪೀಠ, ಖಾತ್ರಿ, ಕೊನೆಯ ಬಾರಿ ಪಡೆದ ಮೂಲ ವೇತನದ ಅರ್ಧದಷ್ಟನ್ನು ನೀಡುವಂತೆ ಆದೇಶಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry