ಹೈಕೋರ್ಟ್ ನ್ಯಾಯಮೂರ್ತಿ ಕುಮಾರ್ ವಿಷಾದ

7

ಹೈಕೋರ್ಟ್ ನ್ಯಾಯಮೂರ್ತಿ ಕುಮಾರ್ ವಿಷಾದ

Published:
Updated:

ಬೆಂಗಳೂರು: `ದೇಶದಾದ್ಯಂತ ವಿವಿಧ ಕೋರ್ಟ್‌ಗಳು ವಾರ್ಷಿಕವಾಗಿ ಕೋಟ್ಯಂತರ ಪ್ರಕರಣಗಳನ್ನು ವಿಲೇವಾರಿ ಮಾಡುತ್ತಿವೆ. ಆದರೂ ಬಾಕಿ ಉಳಿದ ಪ್ರಕರಣಗಳ ಬಗ್ಗೆಯೇ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ. ಈ ಬಗೆಯ ಪ್ರಚಾರವನ್ನು ನ್ಯಾಯಾಂಗದಲ್ಲಿರುವವರೇ ಮಾಡುತ್ತಿರುವುದು ವಿಪರ್ಯಾಸ~ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್‌ಕುಮಾರ್ ಅವರು ವಿಷಾದಿಸಿದರು.`ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ~ (ಎಫ್‌ಕೆಸಿಸಿಐ)ವು `ಪ್ರಕರಣಗಳ ಪರ್ಯಾಯ ನಿರ್ಣಯದ ಅಂತರರಾಷ್ಟ್ರೀಯ ಕೇಂದ್ರ~ದ (ಐಸಿಎಡಿಆರ್) ಸಹಯೋಗದಲ್ಲಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಪ್ರಕರಣಗಳ ಪರ್ಯಾಯ ನಿರ್ಣಯ~ ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, `ಪ್ರಸ್ತುತ 2.90 ಕೋಟಿ ಪ್ರಕರಣಗಳು ವಿವಿಧ ಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ.

 

ಆದರೆ ಅದೇ ಸಮಯದಲ್ಲಿ ವರ್ಷಕ್ಕೆ ಎರಡು ಕೋಟಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಬಗ್ಗೆ ಯಾರೂ ಮಾತನಾಡುವುದಿಲ್ಲವೇಕೆ? ನಿನ್ನೆ ದಾಖಲಾದ ಪ್ರಕರಣಗಳನ್ನು ಸಹ `ಬಾಕಿ~ ಪ್ರಕರಣ ಎಂದು ಪರಿಗಣಿಸಲಾಗುತ್ತಿದೆ~ ಎಂದು ವ್ಯಂಗ್ಯವಾಡಿದರು.`ಇತ್ತೀಚೆಗೆ ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರ ಪುತ್ರ ಮಹಿಳೆಯೊಬ್ಬರನ್ನು ಅತ್ಯಾಚಾರವೆಸಗಿದ್ದ. ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಿ ಕೇವಲ 17 ದಿನಗಳಲ್ಲೇ ತೀರ್ಪು ಪ್ರಕಟಿಸಲಾಯಿತು. ಸಂಸತ್ತಿಗಿಂತಲೂ ವೇಗವಾಗಿ ನ್ಯಾಯಾಂಗ ಕೆಲಸ ಮಾಡುತ್ತಿದೆ~ ಎಂದು ನುಡಿದರು.`ಕೈಗಾರಿಕಾ ಸಂಸ್ಥೆಗಳು ತಮ್ಮ ಪ್ರಕರಣಗಳನ್ನು ಕೋರ್ಟ್‌ಗೆ ಕೊಂಡೊಯ್ಯುವ ಮೊದಲು ಮಧ್ಯಸ್ಥಿಕೆ ಸಂಸ್ಥೆಗಳ ಮೂಲಕ ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು.ಇದರಿಂದ ಸಾರ್ವಜನಿಕರ ಪ್ರಕರಣಗಳ ವಿಲೇವಾರಿಗೆ ಅವಕಾಶ ಸಿಕ್ಕಂತಾಗುತ್ತದೆ. ಈ ಬಗ್ಗೆ ಎಫ್‌ಕೆಸಿಸಿಐ ತನ್ನ ಸದಸ್ಯರೊಂದಿಗೆ ಚರ್ಚಿಸಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಅಗತ್ಯ ಬಿದ್ದರೆ ನಾನೂ ಇದರಲ್ಲಿ ಭಾಗವಹಿಸುತ್ತೇನೆ ಎಂದರು.ಈಗಾಗಲೇ ಉತ್ತರ ಕರ್ನಾಟಕದ ಹಲವು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಆಸಕ್ತಿ ವಹಿಸಿವೆ~ ಎಂದರು.   ಇದಕ್ಕೆ ಪ್ರತಿಕ್ರಿಯೆ ನೀಡಿದ ಒಕ್ಕೂಟದ ಅಧ್ಯಕ್ಷ ಜೆ.ಆರ್‌ಬಂಗೇರಾ, `ಈ ಬಗ್ಗೆ ಒಕ್ಕೂಟದ ನೇರ ಹಾಗೂ ಪರೋಕ್ಷ ಸದಸ್ಯರೊಂದಿಗೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry