ಸೋಮವಾರ, ಏಪ್ರಿಲ್ 12, 2021
22 °C

ಹೈ.ಕ. ಅಭಿವೃದ್ಧಿ: ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮಗಳ ಮಂಡಳಿಯು ಭಾನುವಾರ ಇಲ್ಲಿನ ಎಸ್.ಎಸ್. ಪಾಟೀಲ ಸಭಾಂಗಣದಲ್ಲಿ ಆಯೋಜಿಸಿದ್ದ `ಹೈ.ಕ. ಪ್ರದೇಶ ಅಭಿವೃದ್ಧಿ~ ಜಂಟಿ ಸಂವಾದ ಸಮಾರಂಭದಲ್ಲಿ ಮುಖ್ಯವಾಗಿ ಈ ಭಾಗದ ಅಭಿವೃದ್ಧಿಗೆ ವ್ಯಕ್ತವಾದ ಸಲಹೆಗಳು ಇಲ್ಲಿವೆ.ಭಾರತೀಯ ಸಂವಿಧಾನದಲ್ಲಿ 371ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಈ ಭಾಗಕ್ಕೆ ವಿಶೇಷ ಸವಲತ್ತುಗಳನ್ನು ನೀಡಬೇಕು. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಡಾ. ನಂಜುಂಡಪ್ಪ ವರದಿಯನ್ನು ಅನುಷ್ಠಾನಗೊಳಿಸಬೇಕು. ಹೈದರಾಬಾದ್ ಕರ್ನಾಟಕ ಭಾಗದ ತೊಗರಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡುವುದರೊಂದಿಗೆ ಅವರನ್ನು ಸಶಕ್ತರನ್ನಾಗಿಸಿ ಪ್ರೋತ್ಸಾಹಿಸಬೇಕು.1984ರಲ್ಲಿ ಸರೀನ್ ಸಮಿತಿ ಸಲ್ಲಿಸಿದ ವರದಿಯಂತೆ ಗುಲ್ಬರ್ಗದಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪಿಸಬೇಕು. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಿರುವಂತೆ ಗುಲ್ಬರ್ಗದಲ್ಲಿ ಐಐಐಟಿ, ರಾಯಚೂರಿನಲ್ಲಿ ಐಐಟಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಐಐಎಂ ಕಾಲೇಜುಗಳನ್ನು ಸ್ಥಾಪಿಸಬೇಕು. ಹೊಸೂರ ಅಭಿವೃದ್ಧಿ ರೀತಿಯಲ್ಲೆ ಗುಲ್ಬರ್ಗ-ಬೀದರ್ ಜಿಲ್ಲೆಗಳನ್ನು ಸೆಟೆಲೈಟ್ ನಗರಗಳಾಗಿ ಅಭಿವೃದ್ಧಿಗೊಳಿಸಬೇಕು.ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಟೆಕ್ಸ್‌ಟೈಲ್ ಪಾರ್ಕ್, ಐಟಿ ವಿಶೇಷ ಆರ್ಥಿಕ ವಲಯ, ಔಷಧಿ ಪಾರ್ಕ್, ಸಕ್ಕರೆ ಕ್ಲಸ್ಟರ್, ರೈಸ್ ಪಾರ್ಕ್ ಹಾಗೂ ಆಹಾರ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಬೇಕು. ವಾಡಿ ರೈಲ್ವೆ ಜಂಕ್ಷನ್‌ನ್ನು ಮೇಲ್ದರ್ಜೆಗೆ ಏರಿಸಬೇಕು.ಜಂಟಿ ಸಂವಾದದಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ವಾಣಿಜ್ಯೋದ್ಯಮಗಳ ಮಂಡಳಿ ಸದಸ್ಯರು ಹಾಗೂ ಸೋಲಾಪುರದ ವಾಣಿಜ್ಯೋದ್ಯಮಗಳ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.