ಹೈಟೆಕ್‌ ಜಗ್ಗೇಶ್!

7

ಹೈಟೆಕ್‌ ಜಗ್ಗೇಶ್!

Published:
Updated:
ಹೈಟೆಕ್‌ ಜಗ್ಗೇಶ್!

ಸಾಫ್ಟ್‌ವೇರ್ ಕಂಪೆನಿಯ ಸೆಟ್. ಪಕ್ಕದಲ್ಲಿಯೇ ನಟ ಜಗ್ಗೇಶ್ ಪಕ್ಕಾ ಐಟಿ ಮಂದಿಯ ಗೆಟಪ್ಪಿನಲ್ಲಿ ಕುಳಿತಿದ್ದರು. ಮೌನ ಗಣೇಶನಂತೆ ಅವರು ಪತ್ರಿಕೆ ತಿರುವಿಹಾಕುತ್ತಿದ್ದರೆ, ನಿರ್ದೇಶಕರು ಆ್ಯಕ್ಷನ್ ಕಟ್ ಹೇಳಿ ಮುಗಿಸಿದ್ದರು. ‘ಸಾಫ್ಟವೇರ್ ಗಂಡ’ ಚಿತ್ರದ ಮೊದಲ ಶಾಟ್ ಇದು.ವೆಂಕಟೇಶ್ ನಿರ್ದೇಶನದ ‘ಸಾಫ್ಟವೇರ್ ಗಂಡ’, ಪ್ರಸಕ್ತ ವರ್ಷ ಜಗ್ಗೇಶ್ ಬಣ್ಣಹಚ್ಚಿರುವ ಮೊದಲ ಚಿತ್ರ. ಮಲಯಾಳಂನ ‘ಎಸ್ ಬಾಸ್’ ಚಿತ್ರದ ಕನ್ನಡ ಅವತರಣಿಕೆ ಇದು. ಇಂಗ್ಲಿಷ್ ಸಿನಿಮಾ ‘ದ ಪ್ರಪೋಸಲ್’ನ ಪ್ರಭಾವ ಕಥೆಯ ಮೇಲಿದೆಯಂತೆ.2014ರ ಮೊದಲ ಚಿತ್ರದ ಬಗ್ಗೆ ಖುಷಿಯಿಂದಲೇ ಮಾತು ಆರಂಭಿಸಿದರು ಜಗ್ಗೇಶ್. ‘ಪಕ್ಕಾ ಕಮರ್ಶಿಯಲ್ ಮತ್ತು ಮನರಂಜನಾ ಕಥೆ ಇದು. ಸಾಫ್ಟ್‌ವೇರ್ ಕಂಪೆನಿಯೊಂದರೊಳಗೆ ಜರುಗುವ ಕಾಮಿಡಿಯೇ ಚಿತ್ರದ ಜೀವಾಳ. ಜಾಲಿಜಾಲಿಯಾಗಿ ಜರ್ನಿ ಇಲ್ಲಿದೆೆ’ ಎಂದರು ಜಗ್ಗೇಶ್. ಚಿತ್ರದಲ್ಲಿ ನಾಯಕಿ ಸಾಫ್ಟವೇರ್ ಕಂಪೆನಿಯ ಬಾಸ್‍, ಆ ಬಾಸ್ ಮತ್ತು ಆ ಕಂಪೆನಿಯ ಉದ್ಯೋಗಿಯಾದ ನಾಯಕನ ನಡುವೆ ನಡೆವ ಮಾತು-ಕತೆ ಚಿತ್ರದ ಹೂರಣ.ಬೆಂಗಳೂರು, ಮಂಗಳೂರು, ತೀರ್ಥಹಳ್ಳಿ, ಹೈದರಾಬಾದಿನಲ್ಲಿ ಮೂರು ಹಂತದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ವೆಂಕಟೇಶ್ ಹೇಳಿದರು. ರಾಮಪ್ಪ, ಸಂಪತ್ ಕುಮಾರ್ ಅವರ ಜೊತೆ ನಿರ್ದೇಶಕರೂ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ತುಳು ರಂಗಭೂಮಿ ಕಲಾವಿದ ನವೀನ್ ಪಡೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಜಗ್ಗೇಶ್ ಅವರ ಜೊತೆ ಕೆಲಸ ಮಾಡುವುದಕ್ಕೆ ಸಿಕ್ಕ ಅವಕಾಶದಿಂದ ಸಂತಸಗೊಂಡಿದ್ದಾರೆ.ಸಂಗೀತ ನಿರ್ದೇಶಕ ವೀರ ಸಮರ್ಥ ಮತ್ತು ಚಿತ್ರಸಾಹಿತಿ ಹೃದಯಶಿವ ಅವರೂ ಜಗ್ಗೇಶ್ ನಾಯಕತ್ವದ ಚಿತ್ರದಲ್ಲಿ ಮೊದಲ ಬಾರಿಗೆ ಕೆಲಸ ಮಾಡುತ್ತಿರುವ ಖುಷಿ ಹೊಂದಿದ್ದಾರೆ. ಶಿವ ಮೂರು ಹಾಡುಗಳಿಗೆ ಪದ ಪೋಣಿಸಿದ್ದಾರೆ. ಹೆದ್ದಾರಿ ಚಿತ್ರದಿಂದ ಕನ್ನಡಕ್ಕೆ ಪರಿಚಯವಾಗಿರುವ ನಟಿ ಸಾಕ್ಷಿ ಅವರಿಗೆ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ನಾಯಕಿ ನಿಖಿತಾ ಮೂಹೂರ್ತಕ್ಕೆ ಗೈರಾಗಿದ್ದರು. ಛಾಯಾಗ್ರಾಹಕ ನಾಗೇಶ್ ಆಚಾರ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry