ಶನಿವಾರ, ಏಪ್ರಿಲ್ 10, 2021
29 °C

ಹೈದರಾಬಾದ್‌ನ ಟೆಕ್ಕಿಗಳ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಹೈದರಾಬಾದ್‌ನ ಐವರು ಸಾಫ್ಟ್‌ವೇರ್ ಎಂಜಿನಿಯರ್‌ಗಳಿದ್ದ ವಾಹನವು ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಟ್ರಾಕ್ಟರ್‌ನ ಟ್ರೇಲರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ, ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ಶುಕ್ರವಾರ ನಡೆದಿದೆ.ಒಕ್ಲಹಾಮ ನಗರದ ಬಳಿ ಸಂಭವಿಸಿದ ಈ ದುರ್ಘಟನೆಯಲ್ಲಿ ಮೃತಪಟ್ಟವರ ಹೆಸರನ್ನು ಪೊಲೀಸರು ಅಧಿಕೃತವಾಗಿ ಬಿಡಗಡೆ ಮಾಡದಿದ್ದರೂ, ಉತ್ತರ ಅಮೆರಿಕ ತೆಲುಗು ಸಂಘವು ಸತ್ತವರನ್ನು ಜಸ್ವಂತ್ ರೆಡ್ಡಿ, ಸುಬ್ಬಯ್ಯಗಾರಿ, ಫಣೀಂದ್ರ ಗಾಡೆ, ಅನುರಾಗ್ ಅಂತಾಟಿ, ಶ್ರೀನಿವಾಸ್ ರವಿ ಹಾಗೂ ವೆಂಕಟ್ ಎಂದು ಗುರುತಿಸಿದೆ.ನಗರಕ್ಕೆ ಹೊಂದಿಕೊಂಡಂತಿರುವ ಅಂತರರಾಜ್ಯ ಹೆದ್ದಾರಿಯಲ್ಲಿ ದಕ್ಷಿಣಾಭಿಮುಖವಾಗಿ ಚಲಿಸುತ್ತಿದ್ದ ಭಾರತೀಯ ಎಂಜಿನಿಯರ್‌ಗಳಿದ್ದ ಚಿವ್‌ರೊಲೆಟ್ ಕ್ಯಾಮಾರೊ ವಾಹನವು, ನಿಯಂತ್ರಣ ಕಳೆದುಕೊಂಡು ಮುಂದೆ ಚಲಿಸುತ್ತಿದ್ದ ಟ್ರಾಕ್ಟರ್‌ನ ಟ್ರೆಲರ್‌ಗೆ ಡಿಕ್ಕಿ ಹೊಡೆದಿದೆ.ಟ್ರೇಲರ್‌ಗೆ ಸಿಕ್ಕಿಹಾಕಿಕೊಂಡ ವಾಹನಕ್ಕೆ ಕೂಡಲೇ ಬೆಂಕಿ ಹೊತ್ತಿಕೊಂಡು ಒಳಗಿದ್ದವರೆಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೆದ್ದಾರಿಯ ಗಸ್ತು ಅಧಿಕಾರಿಗಳು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.