ಹೈದರಾಬಾದ್ ಕರ್ನಾಟಕಕ್ಕೆ ಶೂನ್ಯ

7

ಹೈದರಾಬಾದ್ ಕರ್ನಾಟಕಕ್ಕೆ ಶೂನ್ಯ

Published:
Updated:

ಗುಲ್ಬರ್ಗ: ಹಿಂದುಳಿದ ಪ್ರದೇಶವಾದ ಹೈದರಾಬಾದ್ ಕರ್ನಾಟಕವನ್ನು ರೈಲ್ವೆ ಬಜೆಟ್ ಸಂಪೂರ್ಣ ಕಡೆ ಗಣಿಸಿದೆ. ಮೂರು ದಶಕಗಳ ಪ್ರತ್ಯೇಕ ರೈಲ್ವೆ ವಿಭಾಗದ ಬೇಡಿಕೆ ಸೇರಿದಂತೆ ಯಾವ ಬೇಡಿಕೆಗೂ ಸ್ಪಂದಿಸಿಲ್ಲ ಎಂದು ವಿವಿಧ ಸಂಘ ಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣ ಮಾಡುತ್ತಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ, ಬೀದರ್ ಲೋಕಸಭಾ ಸದಸ್ಯ ಧರ್ಮಸಿಂಗ್, ಈ ಭಾಗಕ್ಕೆ ನ್ಯಾಯ ದೊರಕಿಸುವಲ್ಲಿ ವಿಫಲರಾಗಿದ್ದು, ರಾಜಕೀಯ ನಿವೃತ್ತಿ ಘೋಷಿಸಲಿ ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.ಈ ಭಾಗದ ಬೇಡಿಕೆಗಳಿಗೆ ಸ್ಪಂದಿಸದೇ, ಕಣ್ಣೊರೆಸುವ ತಂತ್ರ ವಾಗಿ ಹೈದರಾಬಾದ್- ವಾಡಿ ಯಿಂದ ಗುಲ್ಬರ್ಗದವರೆಗೆ ವಿಸ್ತರಿ ಸಲಾಗುವುದು ಎಂದಿದ್ದಾರೆ. ಈ ರೈಲು ಈಗಾಗಲೇ ಗುಲ್ಬರ್ಗಕ್ಕೆ ವಿಸ್ತರಣೆ ಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವಿ. ರಘೋಜಿ ಲೇವಡಿ ಮಾಡಿದ್ದಾರೆ.ಗುಲ್ಬರ್ಗ- ಬೀದರ್ ಹೊಸ ರೈಲು ಮಾರ್ಗದ ಅಭಿವೃದ್ಧಿಗೆ ಸೂಕ್ತ ಪ್ರಮಾಣದ ಅನುದಾನ ಒದಗಿಸಿಲ್ಲ. ಗುಲ್ಬರ್ಗ- ಬೆಂಗಳೂರು ನೇರ ರೈಲು ಸಂಚಾರದ ಬೇಡಿಕೆಯನ್ನೂ ಕಡೆ ಗಣಿಸಲಾಗಿದೆ.ಸೋಲಾಪುರ- ವಾಡಿ ಮಾರ್ಗ ವಾಗಿ ಬೆಂಗಳೂರು ಗರೀಬ್ ರಥ ಹೊಸ ರೈಲು ಸಂಚಾರ ಮಾರ್ಗಕ್ಕೆ ಸ್ಪಂದಿಸಿಲ್ಲ ಎಂದು ಜಂಟಿ ಕಾರ್ಯ ದರ್ಶಿ ಶಶಿಕಾಂತ ಪಾಟೀಲ, ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.“1984ರ ಸರೀನ್ ವರದಿ ಆಧಾರದಲ್ಲಿ ಗುಲ್ಬರ್ಗ ವಿಭಾಗ ಘೋಷಣೆ ಮಾಡಬೇಕಿತ್ತು. ಬೆಂಗ ಳೂರು- ಗುಲ್ಬರ್ಗ ನಡುವೆ ಹೊಸ ರೈಲುಗಳನ್ನು ಆರಂಭಿಸಬೇಕಿತ್ತು. ಗುಲ್ಬರ್ಗ- ಹೂಟಗಿ ತನಕ ಜೋಡಿ ಮಾರ್ಗದ ಕಾಮಗಾರಿ ಆರಂಭಿಸ ಬೇಕಿತ್ತು. ಹೈದರಾಬಾದ್ ಕರ್ನಾ ಟಕ ಭಾಗದ ಜನರ ರೈಲ್ವೆ  ಬೇಡಿಕೆ ಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟು, ಈಡೇರಿಸಲು ಸಾಧ್ಯ ವಾಗದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ರಾಜೀನಾಮೆ ನೀಡ ಬೇಕು” ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರುಣ ಕುಮಾರ್ ಪಾಟೀಲ ಆಗ್ರಹಿಸಿದ್ದಾರೆ.“ನಮ್ಮದೇ ರಾಜ್ಯದವರಾದ ರಾಜ್ಯ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಇದ್ದರೂ ಗುಲ್ಬರ್ಗ ಭಾಗದ ಯಾವ ಬೇಡಿಕೆಗಳ ಬಗ್ಗೆಯೂ ಸಚಿವರ ಗಮನ ಸೆಳೆ ಯುವಲ್ಲಿ ವಿಫಲವಾಗಿರುವುದು ನಾಯಕರ ವೈಫಲ್ಯವನ್ನು ತೋರಿ ಸುತ್ತದೆ” ಎಂದು ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಉದಯಕುಮಾರ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry