ಶುಕ್ರವಾರ, ಏಪ್ರಿಲ್ 16, 2021
31 °C

ಹೈದರಾಬಾದ್-ಗುಲ್ಬರ್ಗ: ನಾಳೆಯಿಂದ ಸುಖಾಸೀನ ಸುಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ- ಹೈದರಾಬಾದ್ ಮಾರ್ಗದಲ್ಲಿ ಸುಖಾಸೀನ ಬಸ್ ಸಂಚಾರವನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಇದೇ 15ರಿಂದ ಆರಂಭಿಸಲಿದೆ.

ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯು ಈ ಸುಖಾಸೀನ `ಸುಹಾಸ್~ ವಾಹನ ಸಂಚಾರ ಪ್ರಾರಂಭಿಸಿದ್ದು, ಜನತೆ ಸೌಲಭ್ಯದ ಸದುಪಯೋಗ ಪಡೆಯುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿದ್ದಾರೆ.

* ಗುಲ್ಬರ್ಗದಿಂದ ಬಸ್ ಹೊರಡುವ ಸಮಯ ಇಂತಿದೆ: ಬೆಳಿಗ್ಗೆ 4, 6, 6.45, 7.45 ಗಂಟೆ; ಮಧ್ಯಾಹ್ನ 12, 1, 1.30, 2.30, 3.45 ಗಂಟೆ; ಸಂಜೆ 5; ರಾತ್ರಿ 11, 11.30, 12.30 ಗಂಟೆ.

* ಇದೇ ರೀತಿ ಹೈದಾರಾಬಾದಿನಿಂದ ಹೊರಡುವ ಬಸ್ ವೇಳೆ ಹೀಗಿವೆ: ಬೆಳಿಗ್ಗೆ 4, 7.15, 10.15, 11.30 ಗಂಟೆ; ಮಧ್ಯಾಹ್ನ 1.35, 1.45, 2.30 ಗಂಟೆ; ಸಂಜೆ 4.30, 5.45 ಗಂಟೆ ಹಾಗೂ ರಾತ್ರಿ 11, 11.30, 12.15, 12.30 ಗಂಟೆ.

ಜಿಲ್ಲಾ ಸಂಚಾಲಕರಾಗಿ ಪರಶುರಾಮ್.ಪಿ ಆಯ್ಕೆ

ಗುಲ್ಬರ್ಗ: ಕರ್ನಾಟಕ ಲಲಿತಾ ಕಲಾ ಅಕಾಡೆಮಿಯು ಈಚೆಗೆ ನಡೆಸಿದ ಸರ್ವ ಸದಸ್ಯರ ಸಭೆಯಲ್ಲಿ ಯುವ ಚಿತ್ರ ಕಲಾವಿದ ಮತ್ತು ಡೆಕ್ಕನ್ ಆರ್ಟ್ ಸೊಸೈಟಿಯ ಕಾರ್ಯದರ್ಶಿ ಪರಶುರಾಮ.ಪಿ ಅವರನ್ನು ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಗುಲ್ಬರ್ಗ ಜಿಲ್ಲಾ ಸಂಚಾಲಕನಾಗಿ ಆಯ್ಕೆ ಮಾಡಿದೆ ಎಂದು ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಕೆ.ಸುಧೀಂದ್ರ ತಿಳಿಸಿದ್ದಾರೆ.

ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿರುವ ಪರಶುರಾಮ,ಪಿ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾ ಶಿಬಿರ ಹಾಗೂ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಚಿತ್ರ, ಶಿಲ್ಪಗಳ ಕುರಿತು ಬರೆದಿರುವ 75ಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರು ಬರೆದ `ದೃಶ್ಯ ಮಂಥನ~ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ.

ಪರಶುರಾಮ.ಪಿ ಅವರು ಗುಲ್ಬರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯು ನಡೆಸಬಹುದಾದ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸಿ ಅಕಾಡೆಮಿಗೆ ಸಲ್ಲಿಸಬಹುದಾಗಿದೆ, ಅಕಾಡೆಮಿಯ ಸಭೆಗಳಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

   

ಕಾಯಕಯೋಗಿ ಸೋಮಯ್ಯ ಕುರಿತು ಮಾಹಿತಿ ಸಂಗ್ರಹ

ಗುಲ್ಬರ್ಗ: ಜೇವರ್ಗಿ ತಾಲ್ಲೂಕಿನ ನಂದಿಹಳ್ಳಿ   ಗ್ರಾಮದ ಅಕ್ಕಮಹಾದೇವಿ ಸೇವಾ ಸಮಿತಿ  ವತಿಯಿಂದ ಪುಷ್ಪದ ಸೋಮಯ್ಯನವರ ಕುರಿತು ಸಮಗ್ರ  ಮಾಹಿತಿ ಸಂಗ್ರಹ ಕಾರ್ಯವನ್ನು ಕಾಯಕಯೋಗಿ ಪುಷ್ಪದ ಸೋಮಯ್ಯ ಶರಣ ಸಂಸ್ಕೃತಿ ಅಧ್ಯಯನ ವಿಭಾಗ ಹಮ್ಮಿಕೊಂಡಿದೆ ಎಂದು ಅಕ್ಕಮಹಾದೇವಿ ಸೇವಾ ಸಮಿತಿ ಕಾರ್ಯದರ್ಶಿ ಪೂಜಾ ಹೂಗಾರ ತಿಳಿಸಿದ್ದಾರೆ. ಪುಷ್ಪದ   ಸೋಮಯ್ಯ 12ನೇ ಶತಮಾನದ ಅನುಭವ ಮಂಟಪದಲ್ಲಿ ಬಸವಾದಿ ಶರಣರಿಗೂ, ಭಕ್ತ ಸಮೂಹಕ್ಕೂ ಲಿಂಗ ಪೂಜೆಗೆ ಪುಷ್ಪ-ಪತ್ರಿ ಪೂರೈಸುತ್ತಿದ್ದ ಮಹಾನ್ ಶರಣ ಕಾಯಕಯೋಗಿಯಾಗಿದ್ದರು.

ಪುಷ್ಪದ ಸೋಮಯ್ಯ ಶರಣರ ಕುರಿತು ವಚನಗಳು, ಜನನ-ಲಿಂಗೈಕ್ಯ ಉಲ್ಲೇಖಗಳು, ಶಿಲಾ ಶಾಸನಗಳು, ಕೃತಿಗಳು ಇನ್ನಿತರ ಮಾಹಿತಿಗಳನ್ನು ಹೊಂದಿರುವ ಶರಣರು, ಸಂಶೋಧಕರು ಮಾಹಿತಿ ನೀಡಲು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 96866 39600ಗೆ ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.