ಹೈನುಗಾರಿಕೆಗೆ ರೂ 10 ಲಕ್ಷ ಸಾಲ

7

ಹೈನುಗಾರಿಕೆಗೆ ರೂ 10 ಲಕ್ಷ ಸಾಲ

Published:
Updated:

ಆಲಮಟ್ಟಿ: ವಿಜಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ಹೈನುಗಾರಿಕೆಗೆ  ಶೇ 3ರ ಬಿಡ್ಡ ದರದಲ್ಲಿ  ರೂ.1 ಲಕ್ಷ   ದಿಂದ ರೂ.10 ಲಕ್ಷದವರೆಗೆ ರೈತರಿಗೆ ಸಾಲ ನೀಡಲಾಗುವುದು ಎಂದು ವಿಜಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಜಿ ಶಾಸಕ ಶಿವಾನಂದ ಪಾಟೀಲ ಹೇಳಿದರು.ನಿಡಗುಂದಿಯಲ್ಲಿ ಭಾನುವಾರ ನಡೆದ ಕಬ್ಬು ಬೆಳೆಗಾರ ಮತ್ತು ಹೈನುಗಾರಿಕೆ ಕುರಿತು ನಡೆದ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.2ಎಕರೆಯಿಂದ 10 ಎಕರೆ ನೀರಾವರಿ ಭೂಮಿ ಹೊಂದಿರುವ ಕೃಷಿಕರಿಗೆ ಹೈನು ಉದ್ಯಮ ಸ್ಥಾಪಿಸಲು ಅಗತ್ಯವಾಗಿ ಬೇಕಾಗುವ ಒಂದು ಲಕ್ಷ ದಿಂದ 10 ಲಕ್ಷ ರೂಪಾಯಿಗಳವರೆಗೆ  ಸಾಲ ನೀಡಲಾಗುವುದು, ಅದಕ್ಕಾಗಿ 100 ಕೋಟಿವರೆಗೆ ಸಾಲ ನೀಡಲಾಗುವುದು, ಇದರಿಂದ ರೈತರು ಆರ್ಥಿಕವಾಗಿ ಸ್ವಾವಲಂಬನೆ ಆಗಲು ಸಾಧ್ಯ ಎಂದರು. ಧಾರವಾಡದಲ್ಲಿ ಸಹಕಾರಿ ಸಂಘಗಳು ಪ್ರಾರಂಭಗೊಂಡರೂ, ಅವು ಯಶಸ್ವಿ ಸಾಧಿಸಿದ್ದು ವಿಜಾಪುರದಲ್ಲಿ,  ಪ್ರಸಕ್ತ ವರ್ಷ ವಿಜಾಪುರ ಡಿಸಿಸಿ ಬ್ಯಾಂಕ್ ರೂ.1,100 ಕೋಟಿ ವಹಿವಾಟು ನಡೆಸಿದ್ದು, 4 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದರು.ಶಾಸಕ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿ ಗೋ ವು ಸಾಕಲಾಗುತ್ತಿದ್ದು, ಅದರಿಂದಾಗುವ ಲಾಭ ಅಪಾರ ಎಂದರು. ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಅತಿಯಾಗಿ ಬಳಕೆ ಮಾಡದೇ, ಸಾವಯವ ಗೊಬ್ಬರ ಬಳಕೆಯ ಕಡೆ ಹೆಚ್ಚು ಗಮನ ನೀಡಬೇಕು ಎಂದರು.ಕೃಷಿ ಉಪಕರಣ ಪ್ರದರ್ಶನದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ವಿವಿಯ ಆಧ್ಯಾತ್ಮಿಕ ಬೋಧನೆಯ ಮಳಿಗೆ ಯನ್ನು ಶಾಸಕ ಎಸ್.ಕೆ. ಬೆಳ್ಳುಬ್ಬಿ ಉದ್ಘಾಟಿಸಿದರು. ಜಿಪಂ ಸದಸ್ಯ ಶಿವಾನಂದ ಅವಟಿ, ಅರಮನಿ, ಎಮ್. ಎಂ. ತೊಗರಿ, ಬಾಲಚಂದ್ರ ನಾಗರಾಳ ಮೊದಲಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry