ಹೈನುಗಾರಿಕೆಯಲ್ಲಿ ತಂತ್ರಜ್ಞಾನ ಅಳವಡಿಸಿ

7

ಹೈನುಗಾರಿಕೆಯಲ್ಲಿ ತಂತ್ರಜ್ಞಾನ ಅಳವಡಿಸಿ

Published:
Updated:

ಹಗರಿಬೊಮ್ಮನಹಳ್ಳಿ: ರೈತರಲ್ಲದೇ ಯುವ ಸಮುದಾಯ ಕೃಷಿ ಚಟುವಟಿಕೆ ಗಳಿಗೆ ಪೂರಕವಾಗಿ ಉಪ ಕಸುಬಾಗಿ ಹೈನೋದ್ಯಮದತ್ತ ಒಲವು ತೋರಿಸು ತ್ತಿದ್ದಾರೆ. ಅವರಿಗೆ ತಂತ್ರಜ್ಞಾನ ಮತ್ತು ಸೂಕ್ತ ಮಾರ್ಗ ದರ್ಶನ ಒದಗಿಸಿ ಪ್ರೋತ್ಸಾಹಿಸಬೇಕು ಎಂದು ತಾಲ್ಲೂಕು ಹಾಲು ಒಕ್ಕೂಟಗಳ ವಿಸ್ತರಣಾಧಿಕಾರಿ ಪ್ರಕಾಶ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ತಾಲ್ಲೂಕು ಕಾರ್ಯದರ್ಶಿಗಳ ಸಂಘಟನೆ ಹಮ್ಮಿ ಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.ಹಾಲು ಒಕ್ಕೂಟಗಳ ಅಭಿವೃದ್ಧಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಪಾತ್ರ ಹೆಚ್ಚಿನದಾಗಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಹಾಲಿನ ಉತ್ಪಾದನೆಗೆ ಪೂರಕ ತಂತ್ರಜ್ಞಾನ ಒದಗಿಸುವ ಜೊತೆಗೆ ರೈತರಿಗೆ ಲಾಭಾಂಶದ ಪ್ರತಿಶತ 65ರಷ್ಟು ಬೋನಸ್ ನೀಡಿ ಸ್ಪಂದಿಸಬೇಕು ಎಂದರು.ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿರುವ ತಾಲ್ಲೂಕಿನ ಯಾವುದಾದರೂ ಒಂದು ಗ್ರಾಮದಲ್ಲಿ ಸುಸಜ್ಜಿತ ಹಾಲು ಶೀತಲೀಕರಣ ಕೇಂದ್ರ ನಿರ್ಮಿಸುವಂತೆ ಬಳ್ಳಾರಿ ಹಾಲು ಒಕ್ಕೂಟದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಜನ ಪ್ರತಿನಿಧಿಗಳು ಮಾಡಬೇಕು ಎಂದು ಆಶಿಸಿದರು.ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ವಕ್ತಾರ ಅಕ್ಕಿ ತೋಟೇಶ್, ಬಾಚಿಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಈಶ್ವರಗೌಡ, ಪೀಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಪಟ್ಟಣಶೆಟ್ಟಿ, ಹಾಲು ಉತ್ಪಾದಕರ ಸಂಘಗಳ ನಿರ್ದೇಶಕ ಮಡಿವಾಳರ ಕೊಟ್ರೇಶ್ ಮಾತನಾಡಿದರು.ಬೀಳ್ಕೊಡುಗೆ ಸಮಾರಂಭದಲ್ಲಿ ಸಂಘಗಳ ಕಾರ್ಯದರ್ಶಿಗಳು ಪ್ರಕಾಶ್ ಅವರಿಗೆ ಕಂಪ್ಯೂಟರ್ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಸಂಘದ ಗ್ರಾಮ ಘಟಕದ ಅಧ್ಯಕ್ಷ ಕಡ್ಡಿ ಪೋರಪ್ಪ, ಸದಸ್ಯರಾದ ತಳವಾರ ಸಿದ್ದಪ್ಪ, ಉಳ್ಳಾಗಡ್ಡಿ ಕೊಟ್ರಮ್ಮ ಇದ್ದರು. ಸಂಘಗಳ ಕಾರ್ಯದರ್ಶಿ ಗಳಾದ ಅನಿತಾ ಒಂಟಿಗೋಡಿ, ರಮೇಶ ರೆಡ್ಡಿ, ವಿರೂಪಾಕ್ಷ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry