ಮಂಗಳವಾರ, ಮೇ 11, 2021
19 °C

ಹೈನುಗಾರಿಕೆಯಿಂದ ಆರ್ಥಿಕ ಪ್ರಗತಿ ಸಾಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ತಾಲ್ಲೂಕಿನ ರೈತರು ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಮೈಸೂರು-ಚಾಮರಾಜನಗರ ಹಾಲು ಒಕ್ಕೂಟದ ನಿರ್ದೇಶಕ ಎನ್. ಮಹಾದೇವಪ್ಪ ಭಾನುವಾರ ಕರೆ ನೀಡಿದರು.ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ 5 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹಾಲು ಶೀತಲೀಕರಣ ಕಟ್ಟಡದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ವ್ಯವಸಾಯ ಜತೆಗೆ ಹೈನುಗಾರಿಕೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಇಂದು ತಾಲ್ಲೂಕಿನಲ್ಲಿ ಯಾವುದೇ ಶಾಶ್ವತ ನೀರಿನ ಮೂಲಗಳಿಲ್ಲದಿದ್ದರೂ ರೈತರು ಹೈನುಗಾರಿಕೆ ಮಾಡಿಕೊಂಡು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ತಿಳಿಸಿದರು. ರೈತರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು ಮತ್ತು ಖಾಸಗಿ ಹಾಲು ಮಾರಾಟಗಾರರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದರು.ಸಂಘದ ಅಧ್ಯಕ್ಷ ಶೇಖರಪ್ಪ ಮಾತನಾಡಿ, ಎಲ್ಲರ ಸಹಕಾರದಿಂದ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಈಗ ಹಾಲು ಶೀತಲೀಕರಣ ಘಟಕ ಸ್ಥಾಪನೆಯಾಗುತ್ತಿರುವುದರಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದೆ ಎಂದರು.ತಾಲ್ಲೂಕು ಪಂಚಾಯಿತಿ ಸದಸ್ಯ ಪುಟ್ಟಹನುಮಯ್ಯ, ಮೈಸೂರು-ಚಾಮರಾಜನಗರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ನಾಗಬಸವಣ್ಣ, ವಿಸ್ತರಣಾಧಿಕಾರಿಗಳಾದ ಲಕ್ಷ್ಮಣೇಗೌಡ, ಅಣ್ಣಪ್ಪಾಚಾರಿ, ಕಾರ್ಯದರ್ಶಿ ಸುಂದರಪ್ಪ, ನಿರ್ದೇಶಕರುಗಳಾದ ಬಸವಣ್ಣ, ಹೊಣಕಾರನಾಯಕ, ಗೋಪಾಲನಾಯಕ, ಚಿಕ್ಕಣ್ಣನಾಯಕ, ಸಿದ್ಧಶೆಟ್ಟಿ, ಸಂಜೀವಯ್ಯ, ಶಿವನಾಗಮ್ಮ, ಲೆಕ್ಕಪರಿಶೋಧಕ ಶಿವಪ್ಪ, ಹಾಲು ಪರೀಕ್ಷಕ ಮಹಾದೇವಪ್ಪ, ಸಿಬ್ಬಂದಿಗಳಾದ ವೃಷಭೇಂದ್ರ, ಪರಮೇಶ್ವರಪ್ಪ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.