ಹೈನೋದ್ಯಮದಿಂದ ಆರ್ಥಿಕ ಸಬಲತೆ

ಗುರುವಾರ , ಜೂಲೈ 18, 2019
24 °C

ಹೈನೋದ್ಯಮದಿಂದ ಆರ್ಥಿಕ ಸಬಲತೆ

Published:
Updated:

ಗೌರಿಬಿದನೂರು: ಹೈನೋದ್ಯಮದಿಂದ ರೈತರಿಗೆ ಉತ್ತಮ ಆರ್ಥಿಕ ಸಬಲತೆ ಸಾಧಿಸಲು ಸಾಧ್ಯ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ವಿಶ್ವ ಹಾಲು ದಿನಾಚರಣಿ ಅಂಗವಾಗಿ ರೋಗಿಗಳಿಗೆ ಹಾಲು ವಿತರಿಸಿ ಮಾತನಾಡಿದರು.ತಾಲ್ಲೂಕಿನಾದ್ಯಂತ ರೈತರು 1000 ಅಡಿಗಳು ಕೊಳವೆ ಬಾವಿಗಳನ್ನು ಕೊರೆದರು ನೀರು ಸಿಗುತ್ತಿಲ್ಲ. ಆದರೂ ಸಹ ಈ ಭಾಗದ ರೈತರು ಹೆಚ್ಚಾಗಿ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.ಕೋಮಲ್ ಅಧ್ಯಕ್ಷ ಎಸ್.ರಮೇಶ್ ಮಾತನಾಡಿ. ರಾಜ್ಯ ಸರ್ಕಾರ ಲೀಟರ್‌ಗೆ 2 ರೂ.ಗಳಂತೆ ಈವರೆಗೆ ರೈತರಿಗೆ ರೂ.116 ಕೋಟಿಗಿಂತ ಹೆಚ್ಚು ಪ್ರೋತ್ಸಾಹ ಧನ ನೀಡಿದ್ದಾರೆ ಎಂದರು.ಕೋಮಲ್ ನಿರ್ದೇಶಕ ಸುಬ್ಬಾರೆಡ್ಡಿ, ಹನುಮಂತರೆಡ್ಡಿ, ರಮೇಶ್‌ರಾವ್, ಪುರಸಭೆ ಸದಸ್ಯ ತ್ಯಾಗರಾಜ್, ವೈದ್ಯರಾದ ಬಾಲಾಜಿ, ಭಾನು ಡೈರಿ ಉಪ ವ್ಯವಸ್ಥಾಪಕ ಪ್ರಸನ್ನಕುಮಾರ್ ಇನ್ನಿತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry