ಗುರುವಾರ , ಜನವರಿ 23, 2020
20 °C

ಹೈ–ಕ ಮೀಸಲಾತಿ ಪ್ರಮಾಣ ಪತ್ರ: ಶೀಘ್ರ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈದರಾಬಾದ್‌– ಕರ್ನಾ­ಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371(ಜೆ)ರ ಕಲಂ ಅಡಿ­ಯಲ್ಲಿ ಶಿಕ್ಷಣ ಮತ್ತು ಉದ್ಯೋಗ­ದಲ್ಲಿ ಮೀಸಲಾತಿ ಸೌಲಭ್ಯ ಪಡೆ­ಯುವ ಅರ್ಹರಿಗೆ  ಪ್ರಮಾಣಪತ್ರ ಯಾರು ನೀಡಬೇಕು ಎನ್ನುವ ಬಗ್ಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ.ಅರ್ಹತಾ ಪ್ರಮಾಣ ಪತ್ರಗಳನ್ನು ಪಡೆಯಲು ರೂಪಿಸಿದ್ದ ನಿಯಮಾ­ವಳಿ­ಗಳಿಗೆ ಕಳೆದ ಶುಕ್ರವಾರ ಸಚಿವ ಎಚ್‌.ಕೆ. ಪಾಟೀಲ್‌ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಅನುಮೋದನೆ ನೀಡಿದೆ. ಇದೇ ನಿಯಮಾವಳಿಗಳನ್ನು ಮುಂದಿನ ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯ­ಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)