ಭಾನುವಾರ, ಮಾರ್ಚ್ 7, 2021
27 °C

ಹೈ ಲೈಫ್ ವಸ್ತುಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈ ಲೈಫ್ ವಸ್ತುಪ್ರದರ್ಶನ

ದೇಶದ ಅತಿದೊಡ್ಡ ಫ್ಯಾಷನ್, ಲೈಫ್‌ಸ್ಟೈಲ್ ಮತ್ತು ವಿಲಾಸಿ ವಸ್ತುಪ್ರದರ್ಶನ ಹೈ ಲೈಫ್ ನಗರದ ಲಲಿತ್ ಅಶೋಕ ಹೋಟೆಲಿನಲ್ಲಿ ಏಪ್ರಿಲ್ ೩, ೪ ಮತ್ತು ೫ರಂದು ಮೂರು ದಿನಗಳ ಕಾಲ ನಡೆಯಲಿದೆ.ಹೆಸರೇ ಸೂಚಿಸುವಂತೆ ಹೈ ಲೈಫ್ ಫ್ಯಾಷನ್, ಪರ್ಸನಲ್ ಸ್ಟೈಲ್, ಗೃಹಾಲಂಕಾರ ಮತ್ತು ಉಡುಗೊರೆ ಕ್ಷೇತ್ರಗಳಲ್ಲಿ ಇತ್ತೀಚಿನ ಅಂತರರಾಷ್ಟ್ರೀಯ ವಿಲಾಸಿ ವಸ್ತುಗಳು ಮತ್ತು ಅತ್ಯಾಧುನಿಕ ಲೈಫ್‌ಸ್ಟೈಲ್ ಉತ್ಪನ್ನಗಳನ್ನು ಇದು ಪ್ರದರ್ಶಿಸಲಿದೆ.ಮುಂಬೈ, ದೆಹಲಿ, ಜೈಪುರ, ಅಹಮದಾಬಾದ್, ಲಖನೌ, ಪುಣೆ, ಬೆಂಗಳೂರು, ಕೋಲ್ಕತ್ತ ಮತ್ತು ಚೆನ್ನೈನ ೧೫೦ಕ್ಕೂ ಹೆಚ್ಚು ಪ್ರಖ್ಯಾತ ಫ್ಯಾಷನ್ ಡಿಸೈನರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಆಯ್ದ ಕಲಾಕೃತಿಗಳು, ಸಂಗ್ರಹಗಳು ಮತ್ತು ಗೃಹಾಲಂಕಾರ ಉತ್ಪನ್ನಗಳನ್ನೂ ಇಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ.ಶ್ರೀಮಂತ ವರ್ಗವನ್ನು ಗುರಿಯಾಗಿಟ್ಟುಕೊಂಡು ಹೈ ಲೈಫ್ ಪ್ರದರ್ಶನ ನಡೆಯುತ್ತಿದೆ. ಸೆಲೆಬ್ರಿಟಿಗಳು, ಫ್ಯಾಷನ್ ವಿನ್ಯಾಸಕಾರರು, ಒಳ ವಿನ್ಯಾಸಕಾರರು, ಕಲಾವಿದರು ಇಲ್ಲಿ ಗ್ರಾಹಕರಾಗಲಿದ್ದಾರೆ. ಸಾಂಪ್ರದಾಯಿಕದಿಂದ ಸಮಕಾಲೀನ ತೊಡುಗೆಗಳಿಂದ ಹಿಡಿದು, ಆಧುನಿಕ ಜ್ಯುವೆಲರಿಗಳು, ವಿಶೇಷ ಸಂದರ್ಭಗಳಲ್ಲಿ ನೀಡುವ ಉಡುಗೊರೆಗಳು ಇಲ್ಲಿ ಲಭ್ಯ.ಡಿಸೈನರ್ ಸೀರೆಗಳು, ಸೂಟ್, ಕೇಶವಿನ್ಯಾಸದ ಅಕ್ಸೆಸರಿಗಳು, ಪಾದರಕ್ಷೆ, ಬ್ಯಾಗ್, ಮಕ್ಕಳ ಉಡುಗೆ ಇತ್ಯಾದಿಗಳು ದೊರೆಯಲಿವೆ. ಉಡುಪುಗಳು ಮಾತ್ರವಲ್ಲ ಈ ಬಾರಿಯ ಹೈ ಲೈಫ್ ವಸ್ತುಪ್ರದರ್ಶನದಲ್ಲಿ ವಿಶೇಷ ಅಲಂಕಾರಿಕ ಗೃಹೋಪಕರಣಗಳು, ಡಿಸೈನರ್ ಪಾತ್ರೆ, ಕಲಾಕೃತಿಗಳು, ಬೆಳ್ಳಿ, ಪುರಾತನ ಸಾಮಗ್ರಿಗಳು ಇತ್ಯಾದಿಗಳೂ ಇರುತ್ತವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.