ಹೊಂಗೆಎಣ್ಣೆ ಸ್ಟೌ, ಚಾಲಕರಹಿತ ವಿಮಾನ

ಭಾನುವಾರ, ಜೂಲೈ 21, 2019
25 °C

ಹೊಂಗೆಎಣ್ಣೆ ಸ್ಟೌ, ಚಾಲಕರಹಿತ ವಿಮಾನ

Published:
Updated:

ಚಿಕ್ಕಬಳ್ಳಾಪುರ: ಹೊಂಗೆ ಎಣ್ಣೆಯಿಂದ ಅಡುಗೆ ಸ್ಟೌ ಉರಿಸುವುದು, ಚಾಲಕ ರಹಿತ ವಿಮಾನನ್ನು ಒಂದು ಕಿ.ಮೀ. ಎತ್ತರಕ್ಕೆ ಹಾರಿಸುವುದು, ಅತ್ಯಲ್ಪ ಖರ್ಚಿನಲ್ಲಿ ವೆಲ್ಡಿಂಗ್ ಸಾಧನ ತಯಾರಿಸುವುದು, ಕಂಪ್ಯೂಟರ್‌ಗಳಲ್ಲಿ ಕಳೆದು ಹೋದ ವಿಷಯಗಳನ್ನು ಹಿಂಪಡೆಯುವುದು... ಹೀಗೆ ಬಗೆಬಗೆಯ ಪ್ರಾತ್ಯಕ್ಷಿಕೆಗಳನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳವಾರ ಪ್ರದರ್ಶಿಸಿದರು.ನಗರದ ಎಸ್‌ಜೆಸಿಐಟಿ ಕಾಲೇಜಿನ ಪ್ರಯೋಗಾಲಯದಲ್ಲಿ ಮಂಗಳವಾರ ಕಾಲೇಜಿನ ಎಂಟನೇ ಸೆಮಿಸ್ಟರ್ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬಗೆಬಗೆಯ ಪ್ರಯೋಗಗಳನ್ನು ಪ್ರದರ್ಶಿಸಿದರು. ಕಡಿಮೆ ವೆಚ್ಚದ ಈ ಪ್ರಯೋಗಗಳನ್ನು ಭವಿಷ್ಯದಲ್ಲಿ ಸಮರ್ಪಕವಾಗಿ ಬಳಕೆ ಮಾಡಿದರೆ ಉಪಯುಕ್ತವಾಗುವುದು ಎಂದು ಸ್ಪಷ್ಟಪಡಿಸಿದರು.~ಮುಂದಿನ ದಿನಗಳಲ್ಲಿ ಸೀಮೆಎಣ್ಣೆ ದೊರೆಯುವ ಸಾಧ್ಯತೆ ಕಡಿಮೆಯಾಗಲಿದ್ದು, ಇದರ ಹಿನ್ನೆಲೆಯಲ್ಲಿ ಹೊಂಗೆ ಎಣ್ಣೆ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಹೊಂಗೆ ಎಣ್ಣೆ ಮೂಲಕ ಅಡುಗೆ ಸ್ಟೌ ಬಳಸಿದರೆ ದೀರ್ಘ ಕಾಲ ಬಾಳಿಕೆಗೆ ಬರುತ್ತದೆ. ಮಾಲಿನ್ಯಕ್ಕೂ ಅವಕಾಶ ಇರುವುದಿಲ್ಲ~ ಎಂದು ವಿದ್ಯಾರ್ಥಿ ಚೇತನ್ ತಿಳಿಸಿದರು.~ಚಾಲಕ ರಹಿತರ ವಿಮಾನವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬಳಕೆ ಮಾಡಬಹುದು. ಭೌಗೋಳಿಕವಾಗಿ ಮಾಹಿತಿ ಸಂಗ್ರಹಿಸಲು ವಿಮಾನದ ಕ್ಯಾಮೆರಾಗೆ ಅಳವಡಿಸಿ ಚಿತ್ರಗಳನ್ನು ತೆಗೆದುಕೊಳ್ಳಬಹುದು. ಅದೇ ವಿಮಾನವನ್ನು ಯುದ್ಧದ ಸಂದರ್ಭದಲ್ಲೂ ಬಳಕೆ ಮಾಡಬಹುದು~ ಎಂದು ವಿದ್ಯಾರ್ಥಿಗಳಾದ ಬಾಲು ಪ್ರಸಾದ್ ಮತ್ತು ಚಂದ್ರಕೃಷ್ಣರೆಡ್ಡಿ ತಿಳಿಸಿದರು.ವೆಲ್ಡಿಂಗ್ ಸಾಧನದ ಕುರಿತು ಎನ್.ಭರತ್, ಆರ್.ಜಗದೀಶ್ ಮತ್ತು ಎ.ದೇವರಾಜ್ ಅವರು ಪ್ರಾತ್ಯಕ್ಷಿಕೆ ನೀಡಿದರು. ಕಂಪ್ಯೂಟರ್‌ಗಳಲ್ಲಿ ಕಳೆದು ಹೋದ ವಿಷಯಗಳ ಪುನರ್‌ಸಂಗ್ರಹಣೆ ಬಗ್ಗೆ ವಿದ್ಯಾರ್ಥಿನಿಯರಾದ ಹಿತಾ ಮತ್ತು ಇಂದುಮತಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry