ಸೋಮವಾರ, ಜೂನ್ 14, 2021
21 °C
ಕಲಾಪ

ಹೊಂಚು, ಕಾಲಾವಕಾಶ: ಒಂದು ಬೌದ್ಧಿಕ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಕದ ನಿರೀಕ್ಷೆಯಲ್ಲಿ ಕಾದುಕೂರುವ ಸಿಂಹ ಎಷ್ಟೇ ಹೊತ್ತಾದರೂ ತನ್ನ ಕಣ್ಣೋಟದ ಬೀಸಿನಿಂದ ಅದು ತಪ್ಪಿಸಿಕೊಳ್ಳದಂತೆ ನಿಗಾ ವಹಿಸುವುದು ‘ಹೊಂಚು’ (Stalking). ಇದು ವನ್ಯಜೀವಿಗಳ ಮಾತಾಯಿತು. ಮನುಷ್ಯರು? ಅವರೂ ಹಾಗೆಯೇ. ಯಾರನ್ನೋ ತಮ್ಮ ಜಾಣತನದಿಂದಲೋ ಕುಯುಕ್ತಿಯಿಂದಲೋ ಮೋಸದ ಬಲೆಗೆ ಬೀಳಿಸಬೇಕಾದರೆ ನಾನಾ ರೀತಿಯ ಸೋಗುಗಳಿಂದ ಬೆನ್ನುಬೀಳುವುದುಂಟು.ಇದರ ಪರಿವೆ ಇಲ್ಲದವರು ಖೆಡ್ಡಾಕ್ಕೆ ಬಿದ್ದಂತೆಯೇ ತಾನೇ?ಹೊಂಚು ಹಾಕುವವರು, ಅದಕ್ಕೆ ಮಿಕವಾದವರು ಹೀಗೆ ಹೊಂಚುಗಳ ಹಲವು ಬಗೆಗಳು ಐಶ್ವರ್ಯಾ ಅರುಂಬಕ್ಕಮ್‌ ಮುಂಬೈಯ ಎಂಬ ಛಾಯಾಚಿತ್ರಗ್ರಾಹಕಿಯನ್ನು ಕಾಡಿವೆ. ಬಹುದಿನಗಳಿಂದ ವಸ್ತುವೊಂದನ್ನು ಮನಸ್ಸಿನಲ್ಲಿಟ್ಟುಕೊಂಡು ಆ ದಿಸೆಯಲ್ಲಿ ಸಾಂದರ್ಭಿಕ ಛಾಯಾಚಿತ್ರಗಳನ್ನು ತೆಗೆದಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ. ಕಪ್ಪು–ಬಿಳುಪಿನಲ್ಲಿರುವ  ಛಾಯಾಚಿತ್ರಗಳು ಬಗೆಬಗೆಯ ಕತೆಗಳನ್ನು ಅನಾವರಣಗೊಳಿಸುತ್ತವೆ.

ವೈವಿಧ್ಯಮಯ ಕಾರ್ಯಕ್ರಮ.‘ಹೊಂಚು: ಕಾಲ ಮತ್ತು ಅವಕಾಶದ ಮೇಲಿನ ಗುರುತು’ ಎಂಬ ಹೆಸರಿನ ಈ ಛಾಯಾಚಿತ್ರಗಳ ಪ್ರದರ್ಶನವನ್ನು ಕೋರಮಂಗಲ ಕೆಎಚ್‌ಬಿ ಕಾಲೋನಿಯಲ್ಲಿರುವ ಆಟಾಗಲಾಟ ಪುಸ್ತಕ ಮಳಿಗೆಯಲ್ಲಿ ಏರ್ಪಡಿಸಲಾಗಿದೆ.ಫೋಟೊ ಪ್ರದರ್ಶನದೊಂದಿಗೆ ಇದೇ ವಸ್ತುವನ್ನು ಆಧರಿಸಿದ ವೈವಿಧ್ಯಮಯ ಕಾರ್ಯಕ್ರಮವನ್ನೂ ಹಮ್ಮಿಕೊಂಡಿರುವುದು ವಿಶೇಷ.

ಛಾಯಾಚಿತ್ರ ಪ್ರದರ್ಶನ ಮಾರ್ಚ್‌ 20ರ ಗುರುವಾರ ಸಂಜೆ 6ಕ್ಕೆ ಶುರುವಾಗುತ್ತದೆ. ನಂತರ ಭಾವನಾ ವ್ಯಾಸ್‌ ವಿಪ್ಪಾರ್ಥಿ ಮತ್ತು ಕಬಿನಿ ಅಮೀನ್‌ ಅವರ ಪುಸ್ತಕದ ಓದು ಮತ್ತು ಚರ್ಚೆ ಇರುತ್ತದೆ.ಮಾರ್ಚ್ 21ರಂದು ಸಂಜೆ 7ಕ್ಕೆ ಪ್ರಿಯಾಂಕಾ ಪೈ ಅವರ ನೃತ್ಯ ಪ್ರದರ್ಶನವಿದೆ. 22ರಂದು ಚರ್ಚೆ, 23ರಂದು ಕವಯತ್ರಿ ಶಿಖಾ ಮಾಳವಿಯಾ ಅವರಿಂದ ಕಾವ್ಯವಾಚನ ಹಾಗೂ ಸಂವಾದವಿರುತ್ತದೆ. ಇಷ್ಟೂ ದಿನಗಳ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಹೆಚ್ಚಿನ ಮಾಹಿತಿಗೆ: 080-4160 0677/96325 10126/ Thebookstore@attagalatta.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.