ಹೊಗಳುಭಟ್ಟರಿಂದ ಹಾದಿ ತಪ್ಪಿದರು

7

ಹೊಗಳುಭಟ್ಟರಿಂದ ಹಾದಿ ತಪ್ಪಿದರು

Published:
Updated:

ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡು ಜೈಲು ಪಾಲಾಗುವುದಕ್ಕೆ  ಅವರು ತಮ್ಮ ಹೊಗಳುಭಟ್ಟರ ಮಾತುಗಳನ್ನು ನಿಜವೆಂದು ನಂಬಿದ್ದು! ಅನೇಕ ಮಂತ್ರಿಗಳು, ಶಾಸಕರು, ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಯಡಿಯೂರಪ್ಪನವರು ಯಾವ ತಪ್ಪನ್ನೂ ಮಾಡಿಲ್ಲ. ಅವರು ಮಾಡಿದ್ದೆಲ್ಲವೂ  ಸರಿಯಾಗಿದೆಯೆಂದು ಮಂತ್ರ ಜಪಿಸತೊಡಗಿದರು.ಅಷ್ಟೇ ಅಲ್ಲ, ಅವರ  ಭ್ರಷ್ಟಾಚಾರದ ಆಪಾದನೆಗಳೆಲ್ಲ ವಿರೋಧಿ ಪಕ್ಷದವರ, ಮಾಧ್ಯಮದವರ ಸೃಷ್ಟಿಯೆಂದು ಕೂಗಾಡ ಹತ್ತಿದರು. ಈ ಮಾತನ್ನು ನಿಜವೆಂದೇ ನಂಬಿದ ಅವರು ತಮ್ಮ ಆಡಳಿತ ವೈಖರಿಯನ್ನು ಬದಲಿಸಿಕೊಳ್ಳದೆಯೇ ಮುಂದುವರಿದರು.ಅದೇ ಅವರು ಅಧಿಕಾರ ಕಳೆದುಕೊಂಡು ಜೈಲು ಸೇರಲು ಕಾರಣವಾಯಿತೇನೋ.  ಯಡಿಯೂರಪ್ಪನವರ ಮುಖಸ್ತುತಿ ಮಾಡಿ ಅವರನ್ನು ದಾರಿ ತಪ್ಪಿಸಿದವರಲ್ಲಿ ಕೆಲವು ಮಂತ್ರಿಗಳು ಮತ್ತು ಮಠಾಧೀಶರೂ ಭಾಗಿಯಾಗಿರುವುದು ಈ ದುಃಸ್ಥಿತಿಗೆ ಕಾರಣವಾಗಿದೆ.                                                                                           

   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry