ಹೊಗೆಸೊಪ್ಪು ಹರಾಜು ಪ್ರಕ್ರಿಯೆ ಆರಂಭ

7

ಹೊಗೆಸೊಪ್ಪು ಹರಾಜು ಪ್ರಕ್ರಿಯೆ ಆರಂಭ

Published:
Updated:

ರಾಮನಾಥಪುರ: ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರಸಕ್ತ ಸಾಲಿನ ಹೊಗೆಸೊಪ್ಪು ಹರಾಜು ಪ್ರಕ್ರಿಯೆ ಶುಕ್ರ ವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.

ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಪ್ಲಾಟ್-7 ಮತ್ತು 63ರಲ್ಲಿ ರೈತರು ತಲಾ ಒಂದು ಬೇಲ್‌ನಂತೆ ಹದಗೊಳಿಸಿದ್ದ ತಂಬಾಕನ್ನು ಮೊದಲ ಮಾರುಕಟ್ಟೆಗೆ ತಂದಿಟ್ಟು ವಹಿವಾಟು ಆರಂಭಗೊಳ್ಳುವುದನ್ನು ಕುತೂಹಲದಿಂದ ಕಾಯ್ದು ಕುಳಿತಿದ್ದರು.ಪ್ಲಾಟ್-7ರಲ್ಲಿ 36ಬೇಲ್, ಪ್ಲಾಟ್-63ರಲ್ಲಿ 45ಬೇಲ್ ಹೊಗೆಸೊಪ್ಪು ಪ್ರಥಮ ದಿನದ ಮಾರುಕಟ್ಟೆಗೆ ಬಂದಿತ್ತು. ಉಭಯ ಪ್ಲಾಟ್‌ಗಳ ಹರಾಜು ಅಧಿಕ್ಷಕರಾದ ಮಂಜುನಾಥ್, ಕೇಂದ್ರ ತಂಬಾಕು ಮಂಡಳಿ ನಿರ್ದೇ ಶನದ ಮೇರೆಗೆ ಬೆಳಗ್ಗೆ 10.30ಕ್ಕೆ ಇ-ಹರಾಜು ಮೂಲಕ ವಿಧ್ಯುಕ್ತವಾಗಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದರು.ಇಂದಿನ ಮೊದಲ ಮಾರುಕಟ್ಟೆಯಲ್ಲಿ ಐಟಿಸಿ ಸೇರಿದಂತೆ ಇತರೆ ಐದು ಕಂಪನಿಗಳು ತಂಬಾಕು ಖರೀದಿಸಿದವು. ಉತ್ತಮ ಗುಣಮಟ್ಟದ ತಂಬಾಕಿಗೆ 150 ರೂ. ಮಧ್ಯಮ 120 ರೂ. ದರದಲ್ಲಿ ಮಾರಾಟವಾಯಿತು. ಕಳೆದ ಬಾರಿಗೆ ಹೋಲಿಸಿದರೇ ಈ ಬಾರಿ 5ರೂ. ಅಧಿಕವಾಗಿ ಕೇಜಿ ತಂಬಾಕಿಗೆ ಬೆಲೆ ದೊರೆತಿದೆ.ನಂತರ ಎರಡು ಪ್ಲಾಟ್‌ಗಳ ವ್ಯಾಪ್ತಿಯ ರೈತರುಗಳು ಇಂದಿನ ಬೆಲೆ ಕುರಿತು ಅಧೀಕ್ಷಕರ ಜತೆ ಚರ್ಚಿಸಿ, ಅತಿ ಯಾದ ಮಳೆ ಮತ್ತು ಇತರೆ ಸಮಸ್ಯೆ ಗಳಿಂದಲೂ ಕೂಡ ಗುಣ್ಣಮಟ್ಟದ ಹೊಗೆ ಸೊಪ್ಪನ್ನು ಬೆಳೆದಿದ್ದೇವೆ. ಕಳೆದ ಬಾರಿಗಿಂತ ಈ ಸಾಲಿನಲ್ಲಿ ಒಂದಕ್ಕೆ ಎರಡು ಪಟ್ಟು ವೆಚ್ಚವಾಗಿದ್ದು, ಕನಿಷ್ಠ ಕೇಜಿ ತಂಬಾಕಿಗೆ 150, ಗರಿಷ್ಠ 190 ರೂ. ಹಾಗೂ ಸರಾಸರಿ 125ರೂ. ಕೊಡಿಸಬೇಕೆಂದು ಮನವಿ ಮಾಡಿದರು.ಈಗಾಗಲೇ ಹರಾಜು ಮಾರುಕಟ್ಟೆಯನ್ನು ಇದೇ ವರ್ಷ ಡಿಸೆಂಬರ್31 ರೊಳಗೆ ಮುಗಿಸುವಂತೆ ತಂಬಾಕು ಮಂಡಳಿ ಆದೇಶ ನೀಡಿದ್ದು ಎಲ್ಲಾ ರೈತರು ಸೊಪ್ಪನ್ನು ಹದಗೊಳಿಸಿ, ಗುಣಮಟ್ಟದಿಂದ ಬೇಲ್ ಸಿದ್ದಪಡಿಸಿ ನಿಗದಿತ ಅವಧಿಯಲ್ಲಿ ಮಾರುಕಟ್ಟೆಗೆ ತಂದು ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿದರು.ಮಾರುಕಟ್ಟೆಯಲ್ಲಿ ನಡೆಯುವ ವಹಿವಾಟಿನ ಹಣ ಕೊಡಿಸುವಲ್ಲಿ ಮಂಡಳಿ ಸಂಪೂರ್ಣ ಜವಾಬ್ದಾರಿ ಯಾ ಗಿದ್ದು, ಇತರೆ ಮಧ್ಯವರ್ತಿಗಳ ಒತ್ತಡಕ್ಕೆ ಮಣಿದು ಮನೆ ಬಳಿ ಬಂದವರಿಗೆ ತಂಬಾಕು ಮಾರಾಟಮಾಡಿ ಕೈಸುಟ್ಟು ಕೊಳ್ಳಬೇಡಿ, ಉತ್ಪಾದನೆಯಾದ ಸೊಪ್ಪನ್ನುಟೆಂಡರ್‌ಗಿಟ್ಟು ಉತ್ತಮ ದರ ಪಡೆಯುವಂತೆ ಸಲಹೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry