ಸೋಮವಾರ, ಜೂನ್ 14, 2021
27 °C

ಹೊಟ್ಟೆಗೆ ಸೂಜಿ ಚುಚ್ಚಿಕೊಂಡ ಬಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌ (ಪಿಟಿಐ): ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಗಳಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಶೇ 99ರಷ್ಟು ಅಂಕ ಗಳಿಸಿದರೂ ಹತಾಶೆಗೊಂಡ ಒಂಬತ್ತು ವರ್ಷದ ಬಾಲಕನೊಬ್ಬ ಸ್ವಶಿಕ್ಷೆಯ ರೂಪದಲ್ಲಿ ತನ್ನ ಹೊಟ್ಟೆಗೆ ಹೊಲಿಗೆ ಸೂಜಿಗಳನ್ನು ಚುಚ್ಚಿಕೊಂಡಂತಹ ಆಘಾತಕಾರಿ ಘಟನೆ ಇಲ್ಲಿ ನಡೆದಿದೆ.ಬಾಲಕನ ಹೊಟ್ಟೆಯಲ್ಲಿ ಸೇರಿಕೊಂಡಿದ್ದ ಸೂಜಿಗಳನ್ನು ಹೊರ ತೆಗೆ­ಯಲು ವೈದ್ಯರಿಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಬೇಕಾಯಿತು.

ಬಾಲಕನ ತಂದೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ಆತನ ಹೊಟ್ಟೆಯ ಮೇಲೆ ಗಡ್ಡೆಗಳಾಗಿರುವುದನ್ನು ಗುರುತಿಸಿದ್ದಾರೆ.ಆದರೆ ಬಾಲಕ ತನ್ನ ತಂದೆಗೆ ಹತ್ತಿರದಿಂದ ಪರೀಕ್ಷಿಸಲು ಅವಕಾಶ ನೀಡಿರಲಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಹೊಟ್ಟೆನೋವಿನ ಕಾರಣಕ್ಕೆ ಬಾಲಕನನ್ನು ಆಸ್ಪತ್ರೆಗೆ ದಾಖಲಿ­ಸಿದಾಗ ಘಟನೆ ಬೆಳಕಿಗೆ ಬಂದಿದೆ.‘ಅಂತಿಮ ಪರೀಕ್ಷೆ­ಯಲ್ಲಿ ಕಳೆದ ವರ್ಷ ಗಳಿಸಿದಷ್ಟು ಅಂಕವನ್ನು ಈ ಬಾರಿ ಗಳಿಸಲು ಸಾಧ್ಯ­ವಾಗ­ಲಿಲ್ಲ ಎಂಬ ಬೇಸರದಿಂದ  ಸ್ವಶಿಕ್ಷೆಯ ಭಾಗವಾಗಿ ಹೊಟ್ಟೆ­ಯೊಳಗೆ ಸೂಜಿಗಳನ್ನು ಸೇರಿಸಿಕೊಂಡೆ’ ಎಂದು ಬಾಲಕ ತಿಳಿಸಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.