ಹೊಟ್ಟೆ ಉರಿಸುವ ಜೋಡಿ

7

ಹೊಟ್ಟೆ ಉರಿಸುವ ಜೋಡಿ

Published:
Updated:
ಹೊಟ್ಟೆ ಉರಿಸುವ ಜೋಡಿ

ಎಂಟು ವರ್ಷಗಳಿಂದ ‘ಲಿವಿಂಗ್ ಟುಗೆದರ್’ ಸಂಬಂಧವನ್ನು ಆಸ್ಥೆಯಿಂದ ಕಾಯ್ದುಕೊಂಡಿರುವ ಜಾನ್ ಅಬ್ರಹಾಂ ಮತ್ತು ಬಿಪಾಶಾ ಬಸು ಅವರನ್ನು ಕಂಡು ಬಾಲಿವುಡ್ ಜನ ಹೊಟ್ಟೆಕಿಚ್ಚು ಪಡುತ್ತಿದ್ದಾರಂತೆ. ಹೀಗೆಂದಿದ್ದು ಸ್ವತಃ ಬಿಪಾಶಾ.‘ನಮ್ಮನ್ನು ನೋಡಿ ಬೋರಿಂಗ್ ಜೋಡಿ ಎಂದು ಹೀಯಾಳಿಸುತ್ತಿದ್ದಾರೆ. ನಾವಿಬ್ಬರೂ ಜೊತೆಗಿರುವುದು ಕೆಲವರಿಗೆ ಹೊಟ್ಟೆಉರಿ ತರಿಸಿದೆ. ಅದರಿಂದ ನಮ್ಮಿಬ್ಬರದು ‘ಸ್ಮೋಕಿಂಗ್ ಹಾಟ್’ ಜೋಡಿ’ ಎಂದು ಬಿಪ್ಸ್ ನಗುತ್ತಿದ್ದಾಳೆ.2003ರಲ್ಲಿ ತೆರೆಕಂಡ ಜಾನ್ ಜೊತೆ ನಟಿಸಿದ್ದ ‘ಜಿಸ್ಮ್’ ಚಿತ್ರ ಇಂದಿಗೂ ಅವಳ ಫೇವರಿಟ್ ಚಿತ್ರವಂತೆ. ‘ನಮ್ಮಿಬ್ಬರ ನಡುವೆ ಬಿರುಕು ಬಂದಿಲ್ಲ. ನಾವಿಬ್ಬರು ಬೇರೆ ಯಾರೊಂದಿಗೆ ಓಡಾಡುವುದಿಲ್ಲ’ ಅದನ್ನು ಕಂಡು ಕೆಲವರಿಗೆ ಸಹಿಸಲು ಆಗುತ್ತಿಲ್ಲ ಎಂದು ಜಾನ್ ಕೂಡ ಅವಳ ಮಾತಿಗೆ ದನಿ ಸೇರಿಸಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry