ಶನಿವಾರ, ಜೂನ್ 19, 2021
23 °C
ಅಯೋಧ್ಯೆ: ತಾತ್ಕಾಲಿಕ ದೇವಸ್ಥಾನ

ಹೊದಿಕೆ ಬದಲಿಸಲು ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಯೋಧ್ಯೆಯ ವಿವಾದಿತ ಸ್ಥಳದಲ್ಲಿರುವ ತಾತ್ಕಾಲಿಕ ದೇವಸ್ಥಾನಕ್ಕೆ ಹೊದಿಸಿರುವ ಹಳೆಯ ಹೊದಿಕೆ (ಟಾರ್ಪಾಲಿನ್‌) ಮತ್ತು ಹಗ್ಗಗಳನ್ನು ತೆಗೆದು ಹೊಸ ಟಾರ್ಪಾ­ಲಿನ್‌ ಮತ್ತು ಹಗ್ಗಗಳನ್ನು ಅಳವಡಿ­ಸಲು ಸುಪ್ರೀಂ ಕೋರ್ಟ್‌ ಸಂಬಂಧಿಸಿ­ದವರಿಗೆ ಅನುಮತಿ ನೀಡಿದೆ.ಕೇಂದ್ರ ಸರ್ಕಾರ, ಇತರ ಅರ್ಜಿ­ದಾ­ರರು ನ್ಯಾಯಾಲಯದ ಈ ತೀರ್ಮಾ­ನಕ್ಕೆ ಯಾವುದೇ ವಿರೋಧ ವ್ಯಕ್ತಪಡಿ­ಸಲಿಲ್ಲ. ಹಾಗಾಗಿ ನ್ಯಾ.ಎಸ್‌.ಎಸ್‌. ನಿಜ್ಜರ್‌ ನೇತೃತ್ವದ ನ್ಯಾಯಪೀಠ ಈ ಕುರಿತು ಅನುಮತಿ ನೀಡಿತು.ಹಿನ್ನೆಲೆ: ವಿವಾದಿತ ರಾಮ­ಜನ್ಮ ಭೂಮಿ– ಬಾಬರಿ ಮಸೀದಿ ಸ್ಥಳವನ್ನು 3 ಭಾಗಗಳನ್ನಾಗಿ ಹಂಚಿಕೆ ಮಾಡಿ  2010ರ ಸೆಪ್ಟೆಂಬರ್‌ 30ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸ ಲಾಗಿದ್ದ ಹಲವಾರು ಅರ್ಜಿಗ­ಳನ್ನು 2011ರ ಮೇ 9ರಂದು ವಿಚಾರಣೆಗೆ ಅಂಗೀಕರಿಸಿದ ನ್ಯಾಯ­ಪೀಠ, ಅಲಹಾ­ಬಾದ್‌ ಹೈಕೋರ್ಟಿನ ತೀರ್ಪನ್ನು ‘ವಿಚಿತ್ರ’ ಎಂದು ಬಣ್ಣಿಸಿ, ಸ್ಥಳವನ್ನು ಹಂಚಿಕೆ ಮಾಡಬೇಕೆನ್ನುವ ಬೇಡಿಕೆ­ಯನ್ನು ತಿರಸ್ಕರಿಸಿತ್ತು. ಜತೆಗೆ ವಿವಾದಿತ ಸ್ಥಳದಲ್ಲಿ ಯಾವುದೇ ಚಟುವಟಿಕೆ­ಗಳನ್ನು ಕೈಗೊಳ್ಳದಂತೆ ಹಾಗೂ ಯಥಾಸ್ಥಿತಿಯನ್ನು ಕಾಪಾಡು­ವಂತೆ ತಡೆಯಾಜ್ಞೆ ನೀಡಿತ್ತು. ತೀರ್ಪು ನೀಡುವ ಸಂದರ್ಭದಲ್ಲಿ ರಾಮ್‌ಲಲ್ಲಾನ ತಾತ್ಕಾ ಲಿಕ ದೇವಸ್ಥಾನ­ದಲ್ಲಿ ಸಲ್ಲುತ್ತಿದ್ದ ಪೂಜೆಗೆ ಯಾವುದೇ ತೊಂದರೆ ಆಗಿರಲಿಲ್ಲ.ಜತೆಗೆ ಈ ಸ್ಥಳಕ್ಕೆ ಹೊಂದಿಕೊಂಡಂತೆ ಇದ್ದ 67 ಎಕರೆ ಜಮೀನನ್ನು ಕೇಂದ್ರ ಸರ್ಕಾರ ವಶಪಡಿಸಿಕೊಂಡಿದ್ದು, ಈ ಸ್ಥಳದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆಯದಂತೆ ಸುಪ್ರೀಂ ಕೋರ್ಟ್‌ ನಿರ್ಬಂಧ ವಿಧಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.