ಗುರುವಾರ , ಜೂನ್ 24, 2021
29 °C

ಹೊನಲಾಗಿ ಹರಿದ ಹೋಳಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಂಗು ರಂಗಿನ ಹೋಳಿ ಹಬ್ಬಕ್ಕೆ ನಗರ ಭಾನುವಾರ ಸಾಕ್ಷಿಯಾಯಿತು. ನಗರದ ವಿವಿಧ ಬಡಾವಣೆಗಳಲ್ಲಿ ಬಣ್ಣದ ರಂಗು ಎದ್ದು ಕಾಣುತ್ತಿತ್ತು. ಕೈಯಲ್ಲಿ ಪಿಚಕಾರಿ ಹಿಡಿದ ಚಿಣ್ಣರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.ನಗರದ ಪ್ರಮುಖ ಬಡಾವಣೆಗಳಲ್ಲಿ ಸೇರಿದ ಚಿಣ್ಣರು, ಯುವಕರು ಪರಸ್ಪರ ಬಣ್ಣದ ಓಕುಳಿಯಲ್ಲಿ ಮಿಂದೆದ್ದರು. ಎತ್ತಿನ ಬಂಡಿಯಲ್ಲಿ ಬಣ್ಣದ ಬ್ಯಾರೆಲ್‌ಗಳನ್ನು ಇಟ್ಟು ಬಣ್ಣ ಎರಚಿ ಹೋಳಿ ಹಬ್ಬ ಆಚರಿಸಿದರು.ಶಾಸ್ತ್ರಿ ನಗರ, ಬ್ರಹ್ಮಪುರ, ಐವಾನ್ ಶಾಹಿ ಬಡಾವಣೆ, ಮುಕ್ತಂಪುರ, ಹೀರಾಪುರ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ಬಣ್ಣದ ಚಿತ್ತಾರ ಕಂಡು ಬಂದಿತು. ರಾತ್ರಿ 8 ಗಂಟೆ ಸುಮಾರಿಗೆ ಕಾಮ ದಹನ ಮಾಡುವ ಮೂಲಕ ಹಬ್ಬಕ್ಕೆ ರಂಗು ತುಂಬಿದರು.ಹೋಳಿ ಹಬ್ಬ ಅಧಿಕೃತವಾಗಿ ಮಾ. 16ರಂದು ಆಚರಿಸಲಾಗುತ್ತಿದ್ದರೂ, ಜಿಲ್ಲೆಯಲ್ಲಿ ಮಾತ್ರ ಮಾ. 17ರಂದು ವರ್ಣರಂಜಿತವಾಗಿ ಆಚರಿಸಲಾಗುತ್ತದೆ. ಯುವಕರು ಬೈಕ್‌ಗಳಲ್ಲಿ ಮನೆ ಮನೆಗೆ ತೆರಳಿ ಸ್ನೇಹಿತರು, ಬಂಧು ಬಾಂಧವರಿಗೆ ಬಣ್ಣ ಎರಚಿ, ಶುಭಾಶಯ ಕೋರಲು ಅಣಿಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.