ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ

7

ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ

Published:
Updated:

ಕೃಷ್ಣರಾಜಪುರ: `ದೈಹಿಕ ಮತ್ತು ಮಾನಸಿಕ ದೃಢತೆ ಕಾಪಾಡಲು ಕ್ರೀಡೆ ಸಹಾಯಕಾರಿಯಾಗಿದ್ದು, ಯುವಕರು ಕ್ರೀಡಾಚಟುವಟಿಕೆಯಲ್ಲಿ ಹೆಚ್ಚಾಗಿ ಭಾಗವಹಿಸಬೇಕು~ ಎಂದು ಮಾಜಿ ಸಚಿವ ಎ.ಕೃಷ್ಣಪ್ಪ ಸಲಹೆ ನೀಡಿದರು.

ವಿಜನಾಪುರ ಆಟದ ಮೈದಾನದಲ್ಲಿ ಈಚೆಗೆ ಏರ್ಪಡಿಸಿದ್ದ ಹೊನಲು-ಬೆಳಕು ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.ವಿಧಾನಪರಿಷತ್ ಸದಸ್ಯ ಭೈರತಿ ಎಸ್.ಸುರೇಶ್ ಕ್ರೀಡಾಪಟುಗಳಿಗೆ ಟೀ ಶರ್ಟ್ ನೀಡುವುದರ ಮೂಲಕ ಶುಭ ಕೋರಿದರು. ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ, ಕಾಂಗ್ರೆಸ್‌ನ ಹೊರಮಾವು ವಾರ್ಡ್ ಘಟಕದ ಸಮಿತಿಯ ಅಧ್ಯಕ್ಷ ಆರ್.ಪ್ರಕಾಶ್, ಯುವ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್, ನಗರಸಭೆ ಮಾಜಿ ಸದಸ್ಯ ಡಿ.ಕೆ.ಮೋಹನ್ ಬಾಬು ಉಪಸ್ಥಿತರಿದ್ದರು. 24 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದುವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry