ಮಂಗಳವಾರ, ಮಾರ್ಚ್ 2, 2021
31 °C

ಹೊನ್ನಾವರದಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾವರದಲ್ಲಿ ಉತ್ತಮ ಮಳೆ

ಬೆಂಗಳೂರು:  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಭಟ್ಕಳ ಮತ್ತು ದಾಂಡೇಲಿಯಲ್ಲಿ ಸಾಧಾರಣ ಮಳೆಯಾಗಿದೆ.ಮಡಿಕೇರಿಯಲ್ಲಿ 8 ಸೆಂ.ಮೀ ಮಳೆ: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ  ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ.ಮಡಿಕೇರಿ 8, ಭಾಗಮಂಡಲ 7, ಬಂಟ್ವಾಳ 6, ಧರ್ಮಸ್ಥಳ, ಸುಳ್ಯ 5, ಪುತ್ತೂರು, ಶೃಂಗೇರಿ 4, ಮಂಗಳೂರು, ಪಣಂಬೂರು, ಮಾಣಿ, ಮಾದಾಪುರ, ಆಗುಂಬೆ, ಲಿಂಗನಮಕ್ಕಿ, ಜಯಪುರ 3, ಮೂಲ್ಕಿ, ಗೇರುಸೊಪ್ಪ, ನಾಪೋಕ್ಲು, ತಾಳಗುಪ್ಪ, ಕೊಪ್ಪ, ಉಡುಪಿಯಲ್ಲಿ 2 ಸೆಂ.ಮೀ ಮಳೆಯಾಗಿದೆ.ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ

ಮಂಡ್ಯ:
ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆಯ ಒಳಹರಿವಿನಲ್ಲಿ ಸ್ವಲ್ಪ ಹೆಚ್ಚಳವಾಗುತ್ತಿದ್ದಂತೆಯೇ ಹೊರಹರಿವಿನಲ್ಲೂ ಹೆಚ್ಚಳ ಮಾಡಲಾಗಿದೆ. ಗುರುವಾರ ಸಂಜೆ ಅಣೆಕಟ್ಟೆಗೆ 12,116 ಕ್ಯುಸೆಕ್‌ ಒಳಹರಿವಿದ್ದರೆ, ಹೊರಹರಿವು 10,135 ಕ್ಯುಸೆಕ್‌ಗೆ ಹೆಚ್ಚಾಗಿದೆ. ನದಿಗೆ 7,050 ಕ್ಯುಸೆಕ್‌ ನೀರು ಹರಿಯಬಿಡಲಾಗುತ್ತಿದೆ.

ಬುಧವಾರ ಸಂಜೆ ಅಣೆಕಟ್ಟೆಗೆ 10,019 ಕ್ಯುಸೆಕ್‌ ಒಳಹರಿವಿದ್ದರೆ, ಹೊರಹರಿವು 8,055 ಕ್ಯುಸೆಕ್‌ ಇತ್ತು. ನೀರಿನ ಮಟ್ಟ 97.25 ಅಡಿಯಿಂದ 97.63 ಅಡಿಗೆ ಹೆಚ್ಚಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.