ಹೊಯ್ಸಳೇಶ್ವರನಿಗೆ ಇಲ್ಲ ಕಾವಲುಪಡೆ!

7

ಹೊಯ್ಸಳೇಶ್ವರನಿಗೆ ಇಲ್ಲ ಕಾವಲುಪಡೆ!

Published:
Updated:
ಹೊಯ್ಸಳೇಶ್ವರನಿಗೆ ಇಲ್ಲ ಕಾವಲುಪಡೆ!

ವಿಶೇಷ ವರದಿ

ಹಳೇಬೀಡು:
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಸಮಸ್ಯೆಗಳ ಆಗರವಾಗಿದೆ. ಹಗಲು, ರಾತ್ರಿ ಪಾಳೆಯಲ್ಲಿ ದೇವಾಲಯ ರಕ್ಷಣೆ ಮಾಡಲು ಸಿಬ್ಬಂದಿ ಕೊರತೆ ಇದೆ. ಬೆರಳೆಣಿಕೆಯ ಸಿಬ್ಬಂದಿ ಕೆಲಸ ಮಾಡುತ್ತಿರುವುದರಿಂದ ದುಷ್ಕರ್ಮಿಗಳಿಂದ ವಿಗ್ರಹಗಳಿಗೆ ತೊಂದರೆಯಾಗುವ ಅವಕಾಶವಿದೆ.ದೇವಾಲಯಕ್ಕೆ ಅಂದಾಜು ರೂ.60 ಲಕ್ಷ ವೆಚ್ಚದಲ್ಲಿ ನಿರ್ವಹಿಸಿದ ವಿದ್ಯುತ್ ದೀಪ ಕಾಮಗಾರಿಯನ್ನು ತೆರವು ಮಾಡಿದ್ದರೂ, ಕೇಂದ್ರ ಪುರಾತತ್ವ ಇಲಾಖೆ ದೇವಾಲಯಕ್ಕೆ ಆಗಿರುವ ಹಾನಿಯನ್ನು ಮಾತ್ರ ಸರಿಪಡಿಸಿಲ್ಲ. ದೇವಾಲಯದ ನಕ್ಷಾತ್ರಕಾರದ ಜಗುಲಿಯ ನೆಲವನ್ನು ಕೆತ್ತಿ ಅಳವಡಿಸಿದ್ದ ವೈರ್‌ಗಳು ತೆರೆದ ಸ್ಥಿತಿಯಲ್ಲಿವೆ. ವೈರ್‌ಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಪ್ರವಾಸಿಗರು ಭಯದಿಂದ ಓಡಾಡುವಂತಾಗಿದೆ.ಪೈಪ್‌ಲೈನ್‌ಗಳು ವಿಗ್ರಹಗಳಿಗೆ ಅಡ್ಡಲಾಗಿ ನೇತಾಡುತ್ತಿವೆ. ಬೃಹತ್ ಕಾಮಗಾರಿಯಿಂದಾಗಿ ದೇವಾಲಯದಲ್ಲಿದ್ದ ಹಳೆಯ ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ. ದೇವಾಲಯದಲ್ಲಿ ಬೆಳಕು ಇಲ್ಲದೇ ಇರುವುದರಿಂದ ಬಾವಲಿಗಳ ವಾಸಸ್ಥಾನವಾಗಿದೆ.`ದೇವಾಯದಲ್ಲಿನ ಕೆಲವು ವಿಗ್ರಹಗಳು ಸವೆಯುತ್ತಿವೆ, ಹಲವು ವಿಗ್ರಹಗಳಿಗೆ ಫಂಗಸ್ ಬಂದಿದೆ. ಕೇಂದ್ರ ಪುರಾತತ್ವ ಇಲಾಖೆ ಸಂರಕ್ಷಣೆಯ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳಿಗೆ ವಿಚಾರ ತಿಳಿಸಲಾಗಿದೆ. ಶೀಘ್ರದಲ್ಲಿಯೇ ಸಮಸ್ಯೆಗೆ ಪರಿಹಾರ ದೊರಕಲಿದೆ~ ಎನ್ನುತ್ತಾರೆ ಸ್ಥಳೀಯ ಸಿಬ್ಬಂದಿ.ಸ್ಮಾರಕ ವಿಭಾಗದ ಮೇಲ್ವಿಚಾರಣೆ ನೋಡಿಕೊಳ್ಳಲು ಒಬ್ಬ ಅಧಿಕಾರಿಯನ್ನು ಇಲಾಖೆ ನೇಮಿಸಿಲ್ಲ. ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸ್ಮಾರಕಗಳ ನಿರ್ವಹಣೆ ನೋಡಿಕೊಳ್ಳಲು ಹಾಸನ ನಗರದ ಕಚೇರಿಯಲ್ಲಿದ್ದ ಅಧಿಕಾರಿ ವರ್ಗಾವಣೆಯಾದ ನಂತರ ಇಲಾಖೆ ಬದಲಿ ವ್ಯವಸ್ಥೆ ಮಾಡಿಲ್ಲ. ಶ್ರೀರಂಗಪಟ್ಟಣದ ಅಧಿಕಾರಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಹಾಸನ ವಿಭಾಗ ಹಾಗೂ ಸ್ಥಳೀಯವಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.ದೇವಾಲಯದ ಸ್ಮಾರಕ ವಿಭಾಗದ ಕೊಳವೆ ಬಾವಿಯ ವಿದ್ಯುತ್ ಮೋಟಾರ್ ಸರಿಪಡಿಸದೆ ಇರುವುದರಿಂದ ಶೌಚಾಲಯದಲ್ಲಿ ನೀರಿಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ. ದೇವಾಲಯ ಆವರಣದಲ್ಲಿ ಆಗಾಗ್ಗೆ ಕುಡಿಯುವ ನೀರಿಗೆ ಅಭಾವ ಕಾಡುತ್ತದೆ.  ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂದು ದೇವಾಲಯ ಆವರಣದಲ್ಲಿ ಸ್ಥಳೀಯ ಗ್ರಾಪಂ. ಕುಡಿಯುವ ನೀರು ಪೂರೈಕೆ ಮಾಡಲು ಆಸಕ್ತಿವಹಿಸಿದ್ದರೂ ಸ್ಮಾರಕ ವಿಭಾಗ ಅಡ್ಡಿಪಡಿಸುತ್ತಿದೆ.`ವಿದ್ಯುತ್ ಸಮಸ್ಯೆ ನಡುವೆ ಹತ್ತಾರು ಎಕರೆ ಉದ್ಯಾನವನಕ್ಕೆ ನಿರುಣಿಸಬೇಕು. ಪ್ರತಿದಿನ ಉದ್ಯಾನವನ ವಿಭಾಗ ಕುಡಿಯುವ ನೀರು ಪೂರೈಸುವುದು ಸುಲಭ ಸಾಧ್ಯವಲ್ಲ. ಸ್ಮಾರಕ ವಿಭಾಗ ಪ್ರವಾಸಿಗರಿಗೆ ಅಗತ್ಯವಿರುವ ಮೂಲಸೌಲಭ್ಯ ಕಲ್ಪಿಸಿದರೆ ಮಾತ್ರ ಪ್ರವಾಸಿಗರು ಹೊಯ್ಸಳ ದೇವಾಲಯ ವೀಕ್ಷಿಸಲು ಸಾಧ್ಯ ಎಂಬುದು ಚಿಂತಕರ ಅಭಿಪ್ರಾಯ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry