ಮಂಗಳವಾರ, ನವೆಂಬರ್ 19, 2019
23 °C
ಹಾಸನ ವೈದ್ಯಕೀಯ ವಿಜ್ಞಾನಗಳ ವಿದ್ಯಾಲಯ

ಹೊರಗುತ್ತಿಗೆ ಏಜೆನ್ಸಿ ಬದಲಾವಣೆ; ಗೊಂದಲ

Published:
Updated:

ಹಾಸನ: ಇಲ್ಲಿನ ಹಾಸನ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡ ಸಿಬ್ಬಂದಿಯ ಏಜನ್ಸಿ ಬದಲಿಸುವುದಕ್ಕೆ ಸಂಬಂಧಿಸಿದಂತೆ ಬುಧವಾರ ಸಣ್ಣ ಗೊಂದಲ ನಿರ್ಮಾಣವಾಯಿತು.ಬುಧವಾರದಿಂದ ಜಾರಿಯಾಗುವಂತೆ ಒಂದು ತಿಂಗಳ ಮಟ್ಟಿಗೆ ಸುರಕ್ಷಾ ಎಂಬ ಏಜನ್ಸಿಗೆ ಗುತ್ತಿಗೆ ನೀಡಲಾಗಿದ್ದು, ಹಳೆಯ ಏಜನ್ಸಿಯವರು ಕೆಲಸ ಬಿಡಲು ಸಿದ್ಧವಿಲ್ಲದ ಕಾರಣ ಸ್ವಲ್ಪ ಹೊತ್ತು ಎರಡೂಸಂಸ್ಥೆಗಳ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.ಸಂಸ್ಥೆಯಲ್ಲಿ 245 ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ  ಸಾಯಿ ಸೆಕ್ಯುರಿಟೀಸ್ ಎಂಬ ಸಂಸ್ಥೆ ಈ ಸಿಬ್ಬಂದಿಯನ್ನು ಒದಗಿಸಿತ್ತು. ಈ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದಿದ್ದರೂ ಹೊಸ ಏಜನ್ಸಿಯ ನೇಮಕಾತಿಯಲ್ಲಿ ಕೆಲವು ಸಮಸ್ಯೆಗಳಾಗಿರುವುದರಿಂದ ಮೌಖಿಕ ಆದೇಶದ ಮೇಲೆ ಕಳೆದ ಒಂದು ವರ್ಷದಿಂದ ಸಾಯಿ ಸಂಸ್ಥೆಯವರೇ ಕೆಲಸ ಮುಂದುವರಿಸುತ್ತಿದ್ದರು.`ಹೊಸ ಸೆಕ್ಯುರಿಟಿ ಸಂಸ್ಥೆಗೆ ಗುತ್ತಿಗೆ ನೀಡುವುದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಸಂಸ್ಥೆಯ ನಿರ್ದೇಶಕರು ಅದನ್ನು ಉಲ್ಲಂಘಿ ಸಿದ್ದಾರೆ. ಹಿಮ್ಸ ನಿಂದ ನಮಗೆ ಸುಮಾರು ಎರಡು ಕೋಟಿ ರೂಪಾಯಿ ಹಣ ಬರಬೇಕಾಗಿದ್ದು, ಒಂದು ನೋಟಿಸ್ ಸಹ ನೀಡದೆ ಏಕಾಯೇಕಿ ನಮ್ಮನ್ನು ಬದಲಿಸಿದ್ದಾರೆ' ಎಂದು ಸಾಯಿ ಸೆಕ್ಯುರಿಟೀಸ್ ಸಂಸ್ಥೆಯ ಮುಖ್ಯಸ್ಥ ಸೂರಜ್ ಆರೋಪಿಸಿದ್ದಾರೆ.`ತಡೆಯಾಜ್ಞೆಯ ಹೊರತಾಗಿಯೂ ಮಾರ್ಚ್ 14ರಂದು ಹೊಸ ಏಜನ್ಸಿ ನೇಮಕಕ್ಕೆ ಟೆಂಡರ್ ಕರೆದಿದ್ದರು. ಸುರಕ್ಷಾ ಸಂಸ್ಥೆಯನ್ನು ಆಯ್ಕೆ ಮಾಡಿದ್ದರೂ ಮೇಲ್ಮನವಿ ಪ್ರಾಧಿಕಾರದವರು ಅದನ್ನು ರದ್ದು ಮಾಡಿದ್ದರು. ಈಗ ಮತ್ತೆ ಅವರಿಗೇ ಗುತ್ತಿಗೆ ನೀಡಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.ಆದರೆ ಈ ಆರೋಪವನ್ನು ನಿರಾಕರಿಸಿರುವ ಹಿಮ್ಸ ನಿರ್ದೇಶಕ ಡಾ. ರಾಚೇಗೌಡ, `12ತಿಂಗಳ ಅವಧಿಗೆ ಸಾಯಿ ಸೆಕ್ಯುರಿಟೀಸ್ ಅವರನ್ನು ಮುಂದುವರಿಸಲಾಗಿತ್ತು. ಈಗ ಹೊಸ ಟೆಂಡರ್ ಪ್ರಕ್ರಿಯೆ ಮುಗಿದು, ಮೇ 1ರಿಂದ ಜಾರಿಯಾಗುವಂತೆ ಹೊಸ ಏಜನ್ಸಿಯನ್ನು ಆಯ್ಕೆ ಮಾಡಲಾಗಿದೆ. ಈ ನಡುವೆ ಸರ್ಕಾರದ ಆದೇಶದ ಮೇರೆಗೆ ಕೇವಲ ಒಂದು ತಿಂಗಳ ತಾತ್ಕಾಲಿಕ ಅವಧಿಗೆ ಮಾತ್ರ ಸುರಕ್ಷಾ ಸಂಸ್ಥೆಗೆ ಕೆಲಸ ನೀಡಲಾಗಿದೆ' ಎಂದಿದ್ದಾರೆ.`ಹಣಕೊಟ್ಟಿಲ್ಲ ಎಂಬುದು ಸುಳ್ಳು. ಅವರೇ ಹಣ ಸ್ವೀಕರಿಸಿರಲಿಲ್ಲ. ಮೌಖಿಕ ಸೂಚನೆಯ ಹೊರತಾ ಗಿಯೂ ಅವರು ಸಂಸ್ಥೆಗೆ ಸಿಬ್ಬಂದಿಯನ್ನು ಒದಗಿ ಸಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ನೀಡ ಬೇಕಾದ ಎಲ್ಲ ಹಣವನ್ನೂ ಅವರಿಗೆ ಕೊಡುತ್ತೇವೆ' ಎಂದು ರಾಚೇಗೌಡ ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)