ಹೊರಟ್ಟಿ ಶಿಕ್ಷಕರ ಪೇಟೆಂಟ್ ಪಡೆದಿಲ್ಲ

7

ಹೊರಟ್ಟಿ ಶಿಕ್ಷಕರ ಪೇಟೆಂಟ್ ಪಡೆದಿಲ್ಲ

Published:
Updated:

ವಿಜಾಪುರ: `ಇಡೀ ರಾಜ್ಯಕ್ಕೆ ತಾವೊಬ್ಬರೇ ಶಿಕ್ಷಕರ ಪ್ರತಿನಿಧಿ ಎಂಬುದು ಬಸವರಾಜ ಹೊರಟ್ಟಿ ಅವರ ಭ್ರಮೆ. ಅವರೊಬ್ಬರೇ ಶಿಕ್ಷಕರ ಪೇಟೆಂಟ್ ಪಡೆದಿಲ್ಲ. ನಮ್ಮನ್ನೂ ಶಿಕ್ಷಕರೇ ಆಯ್ಕೆ ಮಾಡಿದ್ದಾರೆ. ನಾವೂ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ~ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.`ಶಿಕ್ಷಕರ ಪ್ರತಿನಿಧಿಯಾಗಿರುವ ನಾನು ಶಿಕ್ಷಕರ ಹಿತ ಕಾಪಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ಅನು ದಾನ ಕೊಡಿಸುವ ವಿಷಯದಲ್ಲಿ ಸರ್ಕಾ ರದ ಮನವೊಲಿಸುವಲ್ಲಿ ಯಶಸ್ವಿಯಾಗಿ ದ್ದೇನೆ~ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ರಾಜ್ಯದ ಎಲ್ಲ ಜಿಲ್ಲೆಗಳ ಶಿಕ್ಷಕ ಪ್ರತಿನಿಧಿಗಳ ನಿಯೋಗವನ್ನು ಬೆಂಗಳೂ ರಿಗೆ ಕರೆ ದೊಯ್ದು ಶಿಕ್ಷಣ ಸಚಿವ ರೊಂದಿಗೆ ಸಭೆ ನಡೆಸಿದ್ದೇನೆ. ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊ ಟ್ಟಿದ್ದೇನೆ. ಅನುದಾನ ರಹಿತ ಶಾಲಾ- ಕಾಲೇಜುಗಳಿಗೆ ಅನುದಾನ ನೀಡುವು ದಾಗಿ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳು ಸ್ಪಷ್ಟ ಭರವಸೆ ನೀಡಿದ್ದಾರೆ. ಇದನ್ನು ಸ್ವಾಗತಿ ಸಿದ ನಮ್ಮನ್ನು ನಿಂದಿಸುವ ಮೂಲಕ ಹೊರಟ್ಟಿ ಅವರು ತಮ್ಮ ಹಿರಿತನದ ಗೌರವಕ್ಕೆ ತಾವೇ ಚ್ಯುತಿ ತಂದು ಕೊಂಡಿದ್ದಾರೆ~ ಎಂದರು.`ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಲ್ಲಿ ಧಾರವಾಡ ಹೊರತು ಪಡಿಸಿದರೆ ಬೇರಾವ ಜಿಲ್ಲೆಗಳಲ್ಲಿಯೂ ಹೊರಟ್ಟಿ ಅವರ ಸಂಘಟನೆಯ ಶಿಕ್ಷಕರು ಧರಣಿ ನಡೆಸಿಲ್ಲ. ಧಾರವಾಡದ ಧರಣಿಯಲ್ಲಿ 20-30 ಜನ ಶಿಕ್ಷಕರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಹೊರಟ್ಟಿ ಅವರ ಪಕ್ಷದ ಕಾರ್ಯಕರ್ತರೇ ಆಗಿದ್ದರು~ ಎಂದು ಟೀಕಿಸಿದರು.`ಸೆಕೆಂಡರಿ ಶಿಕ್ಷಕರ ಸಂಘದ ನಾನು, ಬಾಲಕೃಷ್ಣ ಭಟ್‌ರು ಹೋಗಿ ಸರ್ಕಾರದ ಮನವೊಲಿಸಬಾರದಿತ್ತೆ? ಕೇವಲ ಸಂಘರ್ಷದಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂಬುದು ಹೊರಟ್ಟಿ ಅವರಿಗೆ ಗೊತ್ತಿಲ್ಲವೇ? ಸ್ವತಃ ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನೂ ನಂಬುವುದಿಲ್ಲ ಎಂದರೆ ಹೇಗೆ?~ ಎಂದು ಪ್ರಶ್ನಿಸಿದರು.`ಶಾಸಕರಾದ ವೀರಣ್ಣ ಚರಂತಿಮಠ, ಅರುಣ ಶಹಾಪುರ, ಮಾಜಿ ಶಾಸಕ ಬಾಲಕೃಷ್ಣ ಭಟ್ ಅವರ ನಿರಂತರ ಒತ್ತಾಯದ ಮೇರೆಗೆ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಲು ಒಪ್ಪಿಕೊಂ ಡಿದ್ದೇವೆ ಎಂದು ಸ್ವತಃ ಸಚಿವ ಕಾಗೇರಿ ಹೇಳಿದ್ದಾರೆ. ಇದನ್ನು ಸಹಿಸದೇ ಹೊರಟ್ಟಿ ಈ ರೀತಿ ಆರೋಪ ಮಾಡುತ್ತಿರುವುದು ಸಲ್ಲ~ ಎಂದರು.`ಪಠ್ಯ ಪುಸ್ತಕಗಳ ಪುನರ್ ರಚನೆ ಯಲ್ಲಿ ಕೇಸರೀಕರಣವಾಗುತ್ತಿದೆ ಎಂದು ಕೆಲ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಯವರು ಆರೋಪಿಸುತ್ತಿರು ವುದು ಸರಿಯಲ್ಲ. ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ದಶಕಗಳಿಂದ ಇರುವ ತಜ್ಞರೇ ಈಗಲೂ ಇದ್ದಾರೆ~ ಎಂದರು.`ಈ ವಿಷಯದಲ್ಲಿ ಪೂರ್ವಾಗ್ರಹ ಪೀಡಿತರಾಗಿ ರಾಜಕಾರಣ ಮಾಡು ವುದು ಬೇಡ. ಪಠ್ಯ ಪುಸ್ತಕ ರಚನೆಯ ವಿಷಯವನ್ನು ಶಿಕ್ಷಣ ತಜ್ಞರಿಗೆ ಬಿಟ್ಟಿಬಿಡೋಣ~ ಎಂದು ಮನವಿ ಮಾಡಿದರು.`ವಿಜಾಪುರ ಮಹಿಳಾ ವಿಶ್ವವಿದ್ಯಾಲ ಯದ ಸಿಂಡಿಕೇಟ್ ಸದಸ್ಯನನ್ನಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ, ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ನನ್ನನ್ನು ನೇಮಿಸಿದ್ದರು. ಮೂರು ವರ್ಷಗಳ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ~ ಎಂದು ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯರೂ ಆಗಿರುವ ಅರುಣ ಹೇಳಿದರು.`ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯರಾಗಿ ನಾವು ಮಾಡಿದ ಸೇವೆ ನಮಗೆ ಬಹಳಷ್ಟು ಅನುಭವವನ್ನು ಕಟ್ಟಿಕೊಟ್ಟಿದೆ. ಅದರ ಆಧಾರದ ಮೇಲೆ ಮಹಿಳಾ ವಿಶ್ವವಿದ್ಯಾಲಯವನ್ನು ಸರಿ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ~ ಎಂದರು.`ಕರ್ನಾಟಕವನ್ನು ಶಿಕ್ಷಣ ವಲಯವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಹಾಯಕ ಸಚಿವೆ ಡಾ.ಡಿ. ಪುರಂದೇಶ್ವರಿ ಅವರಿಗೆ ಮನವಿ ಸಲ್ಲಿಸಿ ದ್ದೇವು. ನಮ್ಮ ಮಹಿಳಾ ವಿಶ್ವವಿದ್ಯಾಲ ಯಕ್ಕೆ ಭೇಟಿ ನೀಡಿದ ನಂತರ ಅವರು ದೇಶದಲ್ಲಿ 20 ಕೇಂದ್ರೀಯ ಮಹಿಳಾ ವಿವಿ ತೆರೆಯುವುದಾಗಿ ಘೋಷಿಸಿದ್ದಾರೆ. ನಮ್ಮ ಮಹಿಳಾ ವಿವಿಯೇ ಕೇಂದ್ರ ಸರ್ಕಾರಕ್ಕೆ ಪ್ರೇರಣೆಯಾಗಿದೆ~ ಎಂದು ಅರುಣ ಶಹಾಪುರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry