ಹೊರಬಿದ್ದ ಕಿಂಗ್ಸ್, ಇಂಡಿಯನ್ಸ್

7

ಹೊರಬಿದ್ದ ಕಿಂಗ್ಸ್, ಇಂಡಿಯನ್ಸ್

Published:
Updated:

ಜೋಹಾನ್ಸ್‌ಬರ್ಗ್ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ತಂಡಗಳಿದ್ದ `ಬಿ~ ಗುಂಪಿನಿಂದ ಲಯನ್ಸ್ ಹಾಗೂ ಸಿಡ್ನಿ ಸಿಕ್ಸರ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.   ನ್ಯೂ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೂಪರ್ ಕಿಂಗ್ಸ್ 6 ರನ್‌ಗಳ ಗೆಲುವು ಪಡೆಯಿತು. ಆದರೆ ಅದು ಪ್ರಯೋಜನಕ್ಕೆ ಬರಲಿಲ್ಲ. ಭಾರತದ ಮತ್ತೊಂದು ತಂಡ ಕೋಲ್ಕತ್ತ ನೈಟ್ ರೈಡರ್ಸ್ ಕೂಡ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಡೆಲ್ಲಿ ಡೇರ್‌ಡೆವಿಲ್ಸ್ ಮಾತ್ರ ಕಣದಲ್ಲಿ ಉಳಿದುಕೊಂಡಿದೆ. ಈ ತಂಡಗಳು `ಎ~ ಗುಂಪಿನಲ್ಲಿವೆ.  ಸಂಕ್ಷಿಪ್ತ ಸ್ಕೋರ್: ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 (ಮುರಳಿ ವಿಜಯ್ 39, ಫಾಫ್ ಡು ಪ್ಲೆಸಿಸ್ 52, ಎಂ.ಎಸ್.ದೋನಿ 35; ಲಸಿತ್ ಮಾಲಿಂಗ 32ಕ್ಕೆ5); ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ( ರೋಹಿತ್ ಶರ್ಮ 32, ದಿನೇಶ್ ಕಾರ್ತಿಕ್ 74, ಕೀರನ್ ಪೊಲಾರ್ಡ್ 31).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry