ಹೊಲದಲ್ಲಿ ಕುರಿ ಹಿಂಡು ನಿಲ್ಲಿಸದಂತೆ ಮನವಿ

7

ಹೊಲದಲ್ಲಿ ಕುರಿ ಹಿಂಡು ನಿಲ್ಲಿಸದಂತೆ ಮನವಿ

Published:
Updated:

ಸವಣೂರ: ತಾಲ್ಲೂಕಿನ ಎಲ್ಲ ರೈತ ಬಾಂಧವರು ಫೆಬ್ರುವರಿ ತಿಂಗಳ ಕೊನೆಯವರೆಗೂ ತಮ್ಮ ಹೊಲಗಳಲ್ಲಿ ಕುರಿಗಳ ಹಿಂಡನ್ನು ನಿಲ್ಲಿಸಲು ಅವಕಾಶ ನೀಡಬಾರದು ಎಂದು ನಗರದ ರೈತ ಸಮೂಹ ಆಗ್ರಹಿಸಿದೆ.ಈ ಕುರಿತಂತೆ ಪತ್ರಿಕಾ ಪ್ರಕಟಣೆಯ ಮೂಲಕ ತಾಲ್ಲೂಕಿನ ಸಮಸ್ತ ರೈತರಲ್ಲಿ ವಿನಂತಿಸಿ ಕೊಂಡಿರುವ ರೈತ ಮುಖಂಡರು, ಎಲ್ಲ ಕುರಿಸಾಕಾಣಿಕೆ ದಾರರು ಹಾಗೂ ರೈತರು ಈ ಬಗ್ಗೆ ಪರಸ್ಪರ ಸಹಕಾರ ಹಾಗೂ ಸೌಹಾರ್ಧ ಯುತವಾದ ಒಮ್ಮತದ ನಿರ್ಣಯಕ್ಕೆ ಬರಬೇಕು ಎಂದು ಕೋರಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಬೇಸಿಗೆ ಕಾಲ ಆರಂಭಗೊಳ್ಳುತ್ತಿದ್ದಂತೆ, ಕೆಲವು ರೈತರು ತಮ್ಮ ಹೊಲಗಳಲ್ಲಿ ಕುರಿಗಳ ಹಿಂಡನ್ನು ನಿಲ್ಲಿಸಲು ಅವಕಾಶ ನೀಡುತ್ತಿದ್ದಾರೆ. ಇದು ಹೊಲದ ಫಲವತ್ತತೆಯನ್ನು ಹೆಚ್ಚಿ ಸಲು ಅವಶ್ಯಕವಾಗಿದ್ದರೂ, ನೂರಾರು ಸಂಖ್ಯೆಯಲ್ಲಿರುವ ಕುರಿಗಳ ಹಿಂಡಿನಿಂದ ಅನ್ಯ ರೈತರ ಹೊಲಗಳಿಗೆ, ಬೆಳೆಗಳಿಗೆ ಧಕ್ಕೆಯಾಗುತ್ತಿದೆ.ಮಖ್ಯ ರಸ್ತೆಯಿಂದ ದೂರದಲ್ಲಿ ರುವ ಒಳಭಾಗದಲ್ಲಿರುವ, ರಸ್ತೆಗಳೂ ಇಲ್ಲದ ಹೊಲಗಳಿಗೆ ನೂರಾರು ಸಂಖ್ಯೆಯಲ್ಲಿ ಹೋಗುವ ಕುರಿಗಳ ಹಿಂಡು, ಅಕ್ಕಪಕ್ಕದ ಹೊಲಗಳಲ್ಲಿನ ಬೆಳೆಗಳನ್ನು, ಸೊಪ್ಪು, ಮೇವನ್ನು ತಿನ್ನುವದರಿಂದ ಉಳಿದ ರೈತರಿಗೂ ಅಪಾರ ಹಾನಿಯಾಗುತ್ತಿದೆ. ಈ ಕಾರಣ ದಿಂದ ತಾಲ್ಲೂಕಿನ ಸಮಸ್ತ ರೈತರ ಹಿತರಕ್ಷಣೆಗಾಗಿ ಕೆಲವು ಸರ್ವಸಮ್ಮತ ವಾದ ನಿರ್ಣಯ ಕೈಗೊಳ್ಳ ಲಾಗಿದೆ.ತಾಲ್ಲೂಕಿನ ಎಲ್ಲ ರೈತರೂ ಪ್ರತಿ ವರ್ಷ ಫೆಬ್ರುವರಿ ತಿಂಗಳು ಪೂರ್ಣ ಗೊಳ್ಳುವವರೆಗೂ ತಮ್ಮ ಹೊಲಗಳಲ್ಲಿ ಕುರಿಗಳ ಹಿಂಡು ನಿಲ್ಲಲು ಅವಕಾಶ ನೀಡಬಾರದು. ಸುತ್ತಮುತ್ತಲಿನ ಎಲ್ಲ ಹೊಲಗಳಲ್ಲಿ ಬೆಳೆಗಳ ಕೊಯ್ಲು ಪೂರ್ಣಗೊಂಡು, ಮೇವು, ಸೊಪ್ಪಿ ಸಾಗಿಸಿ, ಎಲ್ಲ ಹೊಲ ಗಳೂ ಖಾಲಿಯಾದ ಬಳಿಕ ಕುರಿಗಳನ್ನು ನಿಲ್ಲಿಸಬೇಕು. ಅದಕ್ಕೂ ಮೊದಲೆ ಕುರಿಗಳ ಹಿಂಡನ್ನು ಹೊಲಗಳಲ್ಲಿ ನಿಲ್ಲಿಸಿದರೆ ಅಕ್ಕಪಕ್ಕದ ಹೊಲಗಳಲ್ಲಿ ಬೆಳೆದಿರುವ ಬೆಳೆಯು ಕುರಿಗಳ ಬಾಯಿಗೆ ಬಲಿಯಾಗುತ್ತದೆ ಈ ಬಗ್ಗೆ ಪರಸ್ಪರ ಸಹಕಾರ ಮನೋಭಾವ ತೋರಬೇಕು. ಈ ನಿರ್ಣಯದ ಬಗ್ಗೆ  ಕುರಿ ಸಾಕಾಣಿಕೆ ದಾರರಿಗೂ ಸೌಹಾರ್ಧ ಯುತವಾಗಿ ಮನವರಿಕೆ ಮಾಡಿಕೊಡಬೇಕು. ಫೆಬ್ರುವರಿ ತಿಂಗಳು ಪೂರ್ಣಗೊಂಡ ಬಳಿಕ ಆಸಕ್ತ ರೈತರು ತಮ್ಮ ಹೊಲಗಳಲ್ಲಿ ಕುರಿಯ ಹಿಂಡು ನಿಲ್ಲಲು ಅವಕಾಶ ನೀಡಬಹುದು ಎಂದು ಮನವಿ ಮಾಡಿದ್ದಾರೆ.  ರೈತರ ಹೊಲದಲ್ಲಿ ನಿಲ್ಲಿಸಲಾಗುವ ಕುರಿಗಳ ಹಿಂಡಿನಿಂದ ಅನ್ಯ ರೈತರಿಗೆ ತೊಂದರೆ ಯಾದಲ್ಲಿ ಅಥವಾ ಬೆಳೆ ಹಾನಿಯಾದಲ್ಲಿ ಇದಕ್ಕೆ ಸಂಬಂಧಿಸಿದ ಹೊಲದ ರೈತರೇ ಜವಾಬ್ದಾರ ರಾಗುತ್ತಾರೆ. ಈ ಬಗ್ಗೆ ತಾಲ್ಲೂಕಿನ ಸಮಸ್ತ ರೈತ ಬಾಂಧವರು ಸೂಕ್ತ ಎಚ್ಚರಿಕೆ ವಹಿಸಬೇಕು. ಪರಸ್ಪರ ಸಹಕಾರದೊಂದಿಗೆ ರೈತರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಪ್ರಕಟಣೆ ಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry