`ಹೊಲಿಗೆ ತರಬೇತಿ ಪಡೆದು ಉದ್ಯೋಗ ಕೈಗೊಳ್ಳಿ'

7

`ಹೊಲಿಗೆ ತರಬೇತಿ ಪಡೆದು ಉದ್ಯೋಗ ಕೈಗೊಳ್ಳಿ'

Published:
Updated:

ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ, ದಾವಣಗೆರೆ ಜನ ಶಿಕ್ಷಣ ಸಂಸ್ಥೆ ಹಾಗೂ ಮಡಿಕೇರಿಯ ಜಿಲ್ಲಾ ಸಾಕ್ಷರ ಸಮಿತಿ ಸಂಯುಕ್ತಾಶ್ರಯದಲ್ಲಿ 3 ತಿಂಗಳಿನಿಂದ ಹೊಲಿಗೆ ತರಬೇತಿ ಪಡೆದ 20 ಮಂದಿ ನವಸಾಕ್ಷರ ಮಹಿಳೆಯರಿಗೆ ಗುರುವಾರ ಅಂಗನವಾಡಿ ಕೇಂದ್ರದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.ಸಮಾರಂಭ ಉದ್ಘಾಟಿಸಿದ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೈನಾಬಿ ಮಾತನಾಡಿ, ಉಚಿತವಾಗಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ಹೊಲಿಗೆ ಯಂತ್ರಗಳನ್ನು ಕೊಡಿಸುವ ಭರವಸೆ ನೀಡಿದರು.ಗ್ರಾಮ ಪಂಚಾಯಿತಿ ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ, ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯರು ದಿನದಲ್ಲಿ ಒಂದು ಗಂಟೆಯಾದರೂ ಬಟ್ಟೆಗಳನ್ನು ಹೊಲಿದು ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಬಹುದು ಎಂದರು.ಗ್ರಾಮ ಪಂಚಾಯಿತಿ ಸದಸ್ಯೆ ಎಸ್.ಪಿ. ಭಾಗ್ಯ, ಮಾಜಿ ಅಧ್ಯಕ್ಷೆ ಎನ್.ಕೆ. ಸುಮತಿ, ಕಾರ್ಯದರ್ಶಿ ಹೂವಯ್ಯ, ಮೀನಾಕ್ಷಿ, ದಿವ್ಯ, ಅಶ್ವಿನಿ ಮಾತನಾಡಿದರು.ಈ ಸಂದರ್ಭ ಹೊಲಿಗೆ ತರಬೇತಿ ನೀಡಿದ ಮುಖ್ಯಶಿಕ್ಷಕಿ ಸುಮತಿಸತ್ಯ ಅವರನ್ನು ತರಬೇತಿ ಪಡೆದ ಮಹಿಳೆಯರು ಕಿರುಕಾಣಿಕೆ ನೀಡಿ ಸನ್ಮಾನಿಸಿದರು. ಪೂರ್ಣಿಮಾ, ರಾಗಿಣಿ, ನರೇಶ್ಚಂದ್ರ, ಅಂಗನವಾಡಿ ಕಾರ್ಯಕರ್ತೆಯರು ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry