ಹೊಲಿಗೆ ಯಂತ್ರ ವಿತರಣೆ

7

ಹೊಲಿಗೆ ಯಂತ್ರ ವಿತರಣೆ

Published:
Updated:

ಬೆಂಗಳೂರು: ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ವಲಯ 10ರ ಜಿಲ್ಲೆ 317 ಇ ವತಿಯಿಂದ `ವಿಶ್ವಾಸಾರ್ಹ ಬದುಕಿನಲ್ಲಿ ಮುನ್ನಡೆಯಲು ಯುವಜನರ ಸಬಲೀಕರಣ' ಘೋಷವಾಕ್ಯದಡಿಯಲ್ಲಿ ಪ್ರಾದೇಶಿಕ ಸಮಾವೇಶ ಕೋರಮಂಗಲದ ಎನ್‌ಜಿವಿ ಕ್ಲಬ್‌ನಲ್ಲಿ ಈಚೆಗೆ ನಡೆಯಿತು.

ಸಮಾವೇಶದ ಅಂಗವಾಗಿ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸ, ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ರಕ್ತದಾನ ಶಿಬಿರ, ನೇತ್ರ ಪರೀಕ್ಷೆ-ಚಿಕಿತ್ಸೆ, ಆರೋಗ್ಯ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿತ್ತು. ನಾರಾಯಣ ಹೃದಯಾಲಯದ ನಿರ್ದೇಶಕ ಡಾ.ತಿಮ್ಮಪ್ಪ ಹೆಗ್ಡೆ, ಲೀಡ್ ಇಂಡಿಯಾ ವಿಜೇತ ಆರ್.ಕೆ. ಮಿಶ್ರಾ ಮಾತನಾಡಿದರು. ಯೋಗಪಟು ಭಗಿನಿ ವನಿತಾ ಮುಖ್ಯ ಅತಿಥಿಯಾಗಿದ್ದರು.ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಲಯನ್ಸ್ ವೃದ್ಧಾಶ್ರಮಗಳಿಗೆ ಸವಲತ್ತು ವಿತರಣೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಲಯನ್ಸ್ ಕ್ಲಬ್ ಪ್ರಾದೇಶಿಕ ಮುಖ್ಯಸ್ಥ ಹರೀಶ್ ಹೆಗ್ಡೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry