ಹೊಳಲ್ಕೆರೆ ತಾ.ಪಂ: ಬಿಜೆಪಿಗೆ ಅಧಿಕಾರದ ಗದ್ದುಗೆ

7

ಹೊಳಲ್ಕೆರೆ ತಾ.ಪಂ: ಬಿಜೆಪಿಗೆ ಅಧಿಕಾರದ ಗದ್ದುಗೆ

Published:
Updated:

ಹೊಳಲ್ಕೆರೆ: ಇದೇ ಮೊದಲ ಬಾರಿಗೆ ಬಿಜೆಪಿ ಇಲ್ಲಿನ ತಾ.ಪಂ. ಅಧಿಕಾರದ ಗದ್ದುಗೆ ಹಿಡಿದಿದ್ದು, ಮೊದಲ ಅವಧಿಗೆ ತೊಡರನಾಳು ಗ್ರಾಮದ ಚಿತ್ರಹಳ್ಳಿ ಕ್ಷೇತ್ರದ ಬಿ. ಪ್ರೇಮಾ ಧನಂಜಯ ಅಧ್ಯಕ್ಷೆಯಾಗಿ, ಗುಲಗಂಜಿ ಲಂಬಾಣಿ ಹಟ್ಟಿ ಗ್ರಾಮದ ಬಿ. ದುರ್ಗ ಕ್ಷೇತ್ರದ ಪುಟ್ಟೀಬಾಯಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ 12 ಸದಸ್ಯರೂ ಬೆಂಬಲ ಸೂಚಿಸಿದರು. ಒಟ್ಟು 19 ಸದಸ್ಯ ಬಲವಿರುವ ತಾ.ಪಂ. ನಲ್ಲಿ 12 ಬಿಜೆಪಿ, 5 ಕಾಂಗ್ರೆಸ್, ತಲಾ ಒಂದು ಜೆಡಿಎಸ್ ಮತ್ತು ಪಕ್ಷೇತರರು ಆಯ್ಕೆಯಾಗಿದ್ದರು. ಇಲ್ಲಿನ ತಾ.ಪಂ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು.ಕಳೆದ 30 ವರ್ಷಗಳಿಂದ ಕಂಡ ಕನಸು ಈಗ ನನಸಾಗಿದೆ. ಅವಿರತವಾಗಿ ಪಕ್ಷ ಕಟ್ಟಿ ಬೆಳೆಸಿದ್ದಕ್ಕೆ ಸಾರ್ಥಕವಾಯಿತು. ಮುಂದೆಯೂ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ  ಮಾಜಿ ಶಾಸಕರಮೇಶ್ ತಿಳಿಸಿದರು.ವಿಜಯೋತ್ಸವ: ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಜಿ.ಪಂ. ನೂತನ ಸದಸ್ಯ ಪಿ.ಆರ್. ಶಿವಕುಮಾರ್ ಮಾತನಾಡಿ, ಶಾಸಕ ಎಂ. ಚಂದ್ರಪ್ಪ ಅವರು ತಾಲ್ಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ರಾಜ್ಯ ಸರ್ಕಾರದ ಸಾಧನೆಗಳೇ ನಮ್ಮ ಗೆಲುವಿಗೆ ಕಾರಣವಾದವು. ಮುಂದೆಯೂ ಜನರ ಅಪೇಕ್ಷೆಯಂತೆ ಕೆಲಸ ಮಾಡುತ್ತೇವೆ ಎಂದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಗೌರಿ ರಾಜಕುಮಾರ್, ಮಲ್ಲೇಶ್, ತಾ.ಪಂ. ನೂತನ ಸದಸ್ಯರು ಮತ್ತು ಕಾರ್ಯಕರ್ತರು ಮೆರವಣಿಗೆಯಲ್ಲಿ  ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry