ಹೊಳೆಆಲೂರ: ಮಾದಕ ದ್ರವ್ಯ ಸೇವನೆ ವಿರೋಧಿ ದಿನ

ಭಾನುವಾರ, ಜೂಲೈ 21, 2019
22 °C

ಹೊಳೆಆಲೂರ: ಮಾದಕ ದ್ರವ್ಯ ಸೇವನೆ ವಿರೋಧಿ ದಿನ

Published:
Updated:

ಹೊಳೆಆಲೂರ(ರೋಣ): ವಿಶ್ವ ಪರಂಪರೆಯಲ್ಲಿ ಭಾರತೀಯ ಆಚಾರ- ವಿಚಾರ ಸಂಸ್ಕೃತಿಗೆ ಅಪಾರ ಜನಮನ್ನಣೆ ಇದ್ದು ಇತ್ತಿಚಿಗೆ ನಾವು ನಮ್ಮತನವನ್ನು ಮರೆತು ಪಾಶ್ಚಾತ್ಯ ಆಚಾರ-ವಿಚಾರ ಧಾರೆಯತ್ತ ವಾಲಿರುವುದೇ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ಮಾನಸಿಕ ದೈಹಿಕ ಅಧಃಪತನದತ್ತ ಸಾಗುತ್ತಿದ್ದೇವೆ ಎಂದು ಡಾ ಎ,ಎಸ್, ಪಲ್ಲೇದ ಹೇಳಿದರು.             

            

ಅವರು  ಮಂಗಳವಾರ ಇಲ್ಲಿಯ ಯಚ್ಚರೇಶ್ವರ ಪಿಯು ಕಾಲೇಜಿನಲ್ಲಿ ಜರುಗಿದ ಮಾದಕ ವಸ್ತು ಸೇವನೆ ಹಾಗೂ ಕಾನೂನು ಬಾಹಿರ ವಹಿವಾಟು ವಿಷಯ ಚರ್ಚಾಗೋಷ್ಟಿಯಲ್ಲಿ ಮಾತ ನಾಡಿ,  ಮಾನವ ಜನ್ಮ ಅಮೂಲ್ಯ ವಾದದು, ಕುಡಿತ ಮಾದಕ ವಸ್ತು ಸೇವನೆ, ಗುಟ್ಕಾ, ಸಿಗರೇಟ್ ಇತ್ಯಾದಿ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಸ್ಥಿತಿ ಹಾಳು ಮಾಡಿಕೂಂಡು ಕುಟುಂಬ ಸಮಾಜ ಹಾಗೂ ದೇಶಕ್ಕೆ ಕಂಟಕವಾಗಿದ್ದಾನೆ ಎಂದು ಅವರು ಹೇಳಿದರು.ಯಚ್ಚರೇಶ್ವರ ವಿದ್ಯಾ ಸಂಸ್ಥೆಯ ಅಧ್ಯ್ಯಕ್ಷ  ಎ,ಎನ್,ಬಡಿಗೇರ ಮಾತನಾಡಿ, ಸುಂದರ ಸಮಾಜ ಕಟ್ಟಲು ವಿದ್ಯಾರ್ಥಿ ಹಾಗೂ ಧಾರ್ಮಿಕ ಮಠಮಾನ್ಯಗಳ ಕಾರ್ಯ ಗುರತರವಾದದು ಇವೆರಡು ಕ್ಷೇತ್ರದ ಮೇಲೆ ಸಮಾಜದ ವಿಶ್ವಾಸವಿದ್ದು ವಿದ್ಯಾರ್ಥಿ ಮತ್ತು ಧಾರ್ಮಿಕ ಕೇಂದ್ರಗಳು ವ್ಯಸನಮುಕ್ತ ಸಮಾಜ ನಿರ್ಮಿಸಲು ಪಣತೂಡಬೇಕು ಎಂದರು.                              ಪ್ರಾಚಾರ್ಯ ಆರ್.ಎ.ಪೀರ ಸಾಬಗೋಳ ಮಾತನಾಡಿ, ಪ್ರಪಂಚದಲ್ಲಿ 200 ಮಿಲಿಯನ್ ಜನರು ಮಾದಕ ವ್ಯಸನಿಗಳಾಗಿದ್ದಾರೆ. ಇದರಲ್ಲಿ 10 ಸಾವಿರ ಮಿಲಿಯಗಿಂತ ಹೆಚ್ಚು ವಿದೇಶ ವ್ಯಾಪಾರ ನೆಡೆಯುತ್ತದೆ. ಭಾರತದಲ್ಲಿ 19 ಕೋಟಿ ಜನ ಒಂದಿಲ್ಲೊಂದು ಕೆಟ್ಟ ಚಟುವಟಿಕೆಯಲ್ಲಿ ಪಾಲಗೂಂಡಿದ್ಧಾರೆ ಅದರಲ್ಲಿ ಶೇ 13 ರಷ್ಟು ಯುವಕರು ಇದರ ದಾಸರಾಗಿರುವುದು ಆತಂಕದ ವಿಷಯ ಎಂದರು.                                  

ಕಾರ್ಯಕ್ರಮದಲ್ಲಿ ಡಿ,ಕೆ,ಕುಲಕರ್ಣಿ ಬಿ,ಎಪ್,ಬಾಲನಗೌಡ್ರ ಹಾಜರಿದ್ದರು. ವಿದ್ಯಾರ್ಥಿಗಳಾದ ಮಂಜುನಾಥ ಗಿರಿ ಸಾಗರ ಶಿಲ್ಪಾ ವಾಲಿ ಚರ್ಚೆಯಲ್ಲಿ ಮಾತನಾಡಿದರು. ಅಕ್ಕಮ್ಮ ದಂಡಿನ ಸ್ವಾಗತಿಸಿದರು ಸಿ.ಬಿ.ಕಮ್ಮೋರ ನಿರೂಪಿ ಸಿದರು ಗುರುರಾಜ ಜಾಲಿಹಾಳ ವಂದಿಸಿದರು. ಸಭೆ ನಾಳೆ

ಗದಗ: ಜ್ಯೋತಿ ಪತ್ತಿನ ಸೌಹಾರ್ದ ಸಹ ಕಾರಿ ನಿಯಮಿತದ ಸರ್ವ ಸಾಧಾರಣ ಸಭೆ ಇದೇ 8 ರಂದು ಅಖಿಲ ಭಾರತ ಗಾಣಿಗೇರ ವಿದ್ಯಾ ಹಾಗೂ ಉದ್ಯೋಗ ವರ್ಧಕ ಟ್ರಸ್ಟ್‌ನ ಕಟ್ಟಡದಲ್ಲಿ ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.ಎ.ಎಂ. ಗೌಡರ ಅಧ್ಯಕ್ಷತೆ ವಹಿಸು ವರು. ಸಹಕಾರಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry