ಗುರುವಾರ , ಮೇ 19, 2022
24 °C

ಹೊಳೆಯುವ ರಸ್ತೆಗೆ ಬೇಕು ಉತ್ತಮ ನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ಇಲ್ಲಿನ ಚಿತ್ತಾಪುರ ರಸ್ತೆ ವೃತ್ತದಿಂದ ಎಸ್.ಎಸ್.ಮರಗೋಳ ಕಾಲೇಜಿನ ವೃತ್ತದವರೆಗಿನ ರಸ್ತೆ ಇದೀಗ ಉತ್ತಮಗೊಂಡಿದ್ದು ವಾಹನ ಸಂಚಾರಿಗಳಿಗೆ ಸ್ವರ್ಗದಂತಾಗಿದೆ. ಕೆಲ ತಿಂಗಳ ಹಿಂದೆ ಈ ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಸಾರ್ವಜನಿಕರು, ವಾಹನ ಚಾಲಕರು ರಸ್ತೆಯ ದುಸ್ಥಿತಿ ಕಂಡು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದರು. ಸೈಕಲ್ ಇರಲಿ, ನಡೆದುಕೊಂಡು ಹೋಗಲೂ ಅಸಾಧ್ಯವಾಗಿದ್ದ ರಸ್ತೆಯಲ್ಲಿ ತಗ್ಗುಗುಂಡಿಗಳೆ ರಾರಾಜಿಸುತ್ತಿದ್ದವು! ಚಿತ್ತಾಪುರ-ಶಹಾಬಾದ ಮೂಲಕ ಜೇವರ್ಗಿಗೆ ಇದು ಸಂಪರ್ಕ ರಸ್ತೆಯಾಗಿದ್ದು ಹಲವು ವರ್ಷಗಳ ನಂತರ ಡಾಂಬರು ಕಂಡು ಮಿಂಚುತ್ತಿದೆ. ಆದರೆ ನಿರ್ವಹಣೆ ವಿಚಾರದಲ್ಲಿ ಈ ರಸ್ತೆಯನ್ನು ನಿರ್ಲಕ್ಷಿಸಿದರೆ ಕೆಲವೆ ತಿಂಗಳಲ್ಲಿ ಇದು ಮತ್ತೆ ಯಥಾಸ್ಥಿತಿಗೆ ಬರುವ ಅಪಾಯವಿದೆ ಎಂದು ವಾಹನಸವಾರರು ನುಡಿಯುತ್ತಾರೆ. ಶಹಾಬಾದನಿಂದ ದೇಶದ ಮೂಲೆಮೂಲೆಗೆ ಕಲ್ಲುಚಪ್ಪಡಿ (ಫರ್ಸಿ) ಸರಬರಾಜು ಆಗುತ್ತದೆ.ಗುಲ್ಬರ್ಗ, ಚಿತ್ತಾಪುರ, ವಾಡಿ, ಯಾದಗಿರಿ ಮತ್ತಿತರ ಕಡೆಗಳಿಂದ ಬರುವ ಭಾರಿ ಗಾತ್ರದ ಹಾರುಬೂದಿ ಹೊತ್ತ ವಾಹನಗಳು ಇದೇ ರಸ್ತೆ ಮೂಲಕ ಸಂಚರಿಸುತ್ತವೆ. ಕನಿಷ್ಠ 40-50 ಟನ್‌ಗಳಷ್ಟು ಭಾರವಿರುವ ಈ ವಾಹನಗಳು ಇಂತಹ ರಸ್ತೆಗೆ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಜನರದು. ಲೋಕೋಪಯೋಗಿ ಇಲಾಖೆ ಮುತುವರ್ಜಿ ವಹಿಸುವಂತೆ ಸಂಘಟನೆಗಳು ಕೋರಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.