ಹೊಳೆ ಆಲೂರ ಸಂತೆ ವಿವಾದ: ಬಗೆಹರಿದ ಸಮಸ್ಯೆ

7

ಹೊಳೆ ಆಲೂರ ಸಂತೆ ವಿವಾದ: ಬಗೆಹರಿದ ಸಮಸ್ಯೆ

Published:
Updated:

ಹೊಳೆಆಲೂರ(ರೋಣ): ಗ್ರಾಮದ ವಾರದ ಸಂತೆ ಮಾಡುವ ವಿಷಯ ಕುರಿತು ನಿರ್ಮಾಣವಾಗಿದ್ದ ಗೂಂದಲ ಅ 18 ರಂದು ಜರುಗಿದ ಗ್ರಾಮ ಸಭೆಯಲ್ಲಿ ಯಚ್ಚರೇಶ್ವರ ಮಠದ ಆವರಣದಲ್ಲಿ ನಡೆಯುವ ತೀರ್ಮಾನ  ಮೂಲಕ ಅಂತ್ಯಗೊಂಡಿತು.    

                                                               

ಸಂತೆ ಸ್ಥಳದ ಬಗೆಗೆ ವ್ಯಾಪಾರ‌್ಥರಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಮೂಡಿತ್ತು. ಈ ಹಿನ್ನೆಲೆಯಲ್ಲಿ  ಜರುಗಿದ ಗ್ರಾಮ ಸಭೆಯಲ್ಲಿ ಹಲವು ಗಣ್ಯರು ಅಭಿ ಪ್ರಾಯ ಹಂಚಿಕೊಂಡರು. ಡಿ.ಎಸ್ .ಶೆಲ್ಲಿಕೇರಿ ಮಾತನಾಡಿ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಮುಖ್ಯ ಬಜಾರದಲ್ಲಿ ಸಂತೆ ನಡೆಸುವದು ಒಳಿತು ಎಂದು ಅಭಿಪ್ರಾಯ ತಿಳಿಸಿದರು.ವೀರಣ್ಣ ಗಾಳಿಯವರ ಮಾತನಾಡಿ, ಸುತ್ತಲಿನ ಹಳ್ಳಿಗಳ ಜನರಿಗೆ ಅನುಕೂಲ ವಾಗ ಬೇಕಾದರೆ ಕೇದಾರಿ ಅಂಗಡಿ ಯಿಂದ ಬಸವೇಶ್ವರ ದೇವಸ್ಥಾ ದವರಿಗೆ ಸಂತೆ ಸ್ಥಳ ನಿಗದಿ ಮಾಡು ವಂತೆ ಸೂಚಿಸಿ ದರು.

ಕಲ್ಲಪ್ಪ ವಾಸ್ತ ಮಾತನಾಡಿ, ಗ್ರಾಮದ ಹಳೆಯ ಬಜಾರಿನಲ್ಲಿ ಮಾಡುವುದರಿಂದ ಗ್ರಾಮದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥ ರಿಗೆ ಅನುಕೂಲ ಎಂದು ಹೇಳಿದರು.ವಿನಾಯಕ ಬೆಳಗಾವಂಕರ ಮಾತ ನಾಡಿ ಬಹು ಜನರ ಅಭಿಪ್ರಾಯ ಮಠದ ಜಾಗ ಸೂಕ್ತ ಎನಿಸಿದೆ. ವಿಶಾಲ ಸ್ಥಳವಿದ್ದು ಸ್ಪರ್ಧಾತ್ಮಕ ದರ ಹಾಗೂ ಗುಣಮಟ್ಟದ ವಸ್ತು ಬಳಸಿ ವ್ಯಾಪಾರ ಮಾಡುವಂತೆ ಅಭಿಪ್ರಾಯ ಹಂಚಿ ಕೊಂಡರು. ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಶೇಕಣ್ಣ ತೋಟದ ಮಾತನಾಡಿ ಗ್ರಾಮದ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಸಾರ್ವ ಜನಿಕರು ಪಕ್ಷಾತೀತವಾಗಿ ಮುಕ್ತ ಮನಸ್ಸಿನಿಂದ ಸಮಸ್ಯ ಬಗೆಹರಿಸಿ ಕೋಳ್ಳೋಣ ಎಂದರು.      

                                                       

ಹಲವು ಗಣ್ಯರ ಅಭಿಪ್ರಾಯದ ನಂತರ ಗ್ರಾ.ಪಂ.ಅಧ್ಯಕ್ಷ ಜಗದೀಶ ಬ್ಯಾಡಗಿ ಮಾತನಾಡಿ ಮುಖ್ಯ ಬಜಾರಿನಲ್ಲಿ ಸಂತೆ ಮಾಡುವುದರಿಂದ ಶಾಲಾ ಮಕ್ಕಳಿಗೆ ತೊಂದರೆ ಯಾಗು ತ್ತದೆ ಎಂದು ಸರಕಾರಿ ಹೆಣ್ಣುಮಕ್ಕಳ ಶಾಲೆ, ಮಾದರಿಯ ಕೇಂದ್ರ ಶಾಲೆ, ಅಂಗನವಾಡಿ ಕೇಂದ್ರದವರು ಮನವಿ ಸಲ್ಲಿಸಿದ್ದಾರೆ ಎಂದು ಸಭೆಗೆ ಹೇಳಿದರು.ಬಹು ಜನರ ಅಭಿಪ್ರಾಯದಂತೆ ಮಠದ ಆವರಣ ವಿಶಾಲವಾಗಿದ್ದು ಸಂತೆ ನಡೆಸಲು ಸಾರ್ವಜನಿಕರಿಗೆ ಅದೇ ಸೂಕ್ತ ಸ್ಥಳವಾಗಿದ್ದು ಅಲ್ಲಯೇ ಸಂತೆ ಏರ್ಪಡಿಸುವಂತೆ 40 ಜನ ವ್ಯಾಪಾ ರ‌್ಥರು ಮನವಿ ಸಲ್ಲಿಸಿದ್ದು ಬಹು ಜನರ ಅಭಿಪ್ರಾಯದಂತೆ ಮಠದ ಆವರಣ ದಲ್ಲಿ ಸಂತೆ ಮಾಡಲು ನಿಶ್ಚಯಿಸ ಲಾಗಿದೆ ಎಂದರು.             

                

 ಸಾರ್ವಜನಿಕರು ಯಾವುದೆ ಸಮಸ್ಯೆ ಕಂಡು ಬಂದರೆ ತಮ್ಮಂದಿಗೆ ಮುಕ್ತ ವಾಗಿ ಚರ್ಚಿಸಿ ಬಗೆ ಹರಿಸಿ ಕೊಳ್ಳಬಹುದು ಎಂದು ಗ್ರಾ. ಪಂ ಅಧ್ಯಕ್ಷ ಜಗದೀಶ ಬ್ಯಾಡಗಿ ಈ ಸಂದರ್ಭದಲ್ಲಿ ತಿಳಿಸಿದರು.                                                            

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry