ಹೊಸಕೋಟೆಗೆ ನ.4ರಂದು ಮುಖ್ಯಮಂತ್ರಿ ಭೇಟಿ

7

ಹೊಸಕೋಟೆಗೆ ನ.4ರಂದು ಮುಖ್ಯಮಂತ್ರಿ ಭೇಟಿ

Published:
Updated:

ಹೊಸಕೋಟೆ: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ನ. 4 ರಂದು ಹೊಸಕೋಟೆಗೆ ಭೇಟಿ ನೀಡಲಿದ್ದು, ಸುಮಾರು 200 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದರು.ಎಲೆ ಮಲ್ಲಪ್ಪ ಕೆರೆಯ ಹೆಚ್ಚುವರಿ ನೀರನ್ನು ಹೊಸಕೋಟೆ ದೊಡ್ಡ ಕೆರೆಗೆ ತರುವ ಏತ ನೀರಾವರಿ ಯೋಜನೆಗೆ ಚಾಲನೆ, ನೂತನ ಬಿಎಂಟಿಸಿ ಬಸ್ ಡಿಪೋ ಉದ್ಘಾಟನೆ, ಕಾರ್ಮಿಕ ಇಲಾಖೆಯಿಂದ ರಾಜ್ಯದಲ್ಲೇ ಪ್ರಥಮವಾಗಿ 16 ರಿಂದ 18 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಜಾರಿಗೊಳಿಸಲಿರುವ ಕೌಶಲ್ಯ ತರಬೇತಿ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry