ಹೊಸಕೋಟೆ ಬಳಿ ಅಪಘಾತ: ಇಬ್ಬರ ಸಾವು

7

ಹೊಸಕೋಟೆ ಬಳಿ ಅಪಘಾತ: ಇಬ್ಬರ ಸಾವು

Published:
Updated:

ಹೊಸಕೋಟೆ: ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.ಪಟ್ಟಣದ ಹೊರವಲಯದ ಎಂವಿಜೆ ಆಸ್ಪತ್ರೆಯ ಎದುರು ಮಗನೊಂದಿಗೆ ರಸ್ತೆ ದಾಟುತ್ತಿದ್ದ ನರಸಾಪುರ ಹೋಬಳಿ ಕರಿನಾಯಕನಹಳ್ಳಿಯ ಶೋಭಾ ಮೇರಿ (26) ಎಂಬವರಿಗೆ ಕ್ವಾಲಿಸ್‌ ಡಿಕ್ಕಿ ಹೊಡೆಯಿತು. ಮಹಿಳೆ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡ ಮೂರೂವರೆ ವರ್ಷದ ಭುವನ್‌ ಕುಮಾರ್‌ನನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ.ಶೋಭಾಮೇರಿ ಎಂವಿಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಸಂಬಂಧಿಕರನ್ನು ನೋಡಿಕೊಂಡು ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ. ಕ್ವಾಲಿಸ್‌ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ.ಮತ್ತೊಂದು ಪ್ರಕರಣದಲ್ಲಿ ಕೋಲಾರ ರಸ್ತೆಯ ಕೊಳತೂರು ಸಮೀಪ ಬೈಕ್‌ನಿಂದ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ಯಲಹಂಕದ ರಾಕೇಶ್‌ (24) ಮೃತಪಟ್ಟ ಯುವಕ.  ಔಷಧಿ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದ ಅವರು ಐವರು ಸ್ನೇಹಿತರ ಜೊತೆಗೆ ಮೂರು ಬೈಕ್‌ಗಳಲ್ಲಿ ಶನಿವಾರ ರಾತ್ರಿ ತಿರುಪತಿಗೆ ಹೋಗಿದ್ದರು.  ಅವರೆಲ್ಲ ಅಲ್ಲಿಂದ ಭಾನುವಾರ ರಾತ್ರಿ ಬೆಂಗಳೂರಿಗೆ ಹೊರಟಿದ್ದರು.ಕೊಳತೂರು ಸಮೀಪ ಅಂಬರೀಷ್‌ ಎಂಬವರು ಚಲಾಯಿಸುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಹಿಂಬದಿ ಕುಳಿತಿದ್ದ ರಾಕೇಶ್‌ ವಿಭಜಕದ ಆಚೆ ರಸ್ತೆಯ ಬಲಭಾಗದಲ್ಲಿ ಕೆಳಕ್ಕೆ ಬಿದ್ದರು. ಆಗ ವಾಹನವೊಂದು  ಹರಿದು ಅವರು ಮೃತಪಟ್ಟರು. ಹೊಸಕೋಟೆ ಪೊಲೀಸರು ಎರಡೂ ಪ್ರಕರಣ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry