ಹೊಸಕೋಟೆ: 25ರಂದು ಮಾಹಿತಿ ಶಿಬಿರ

7

ಹೊಸಕೋಟೆ: 25ರಂದು ಮಾಹಿತಿ ಶಿಬಿರ

Published:
Updated:

ಹೊಸಕೋಟೆ: ವಿಶ್ವ ಭಾವೈಕ್ಯತಾ ಮಂಟಪ ಟ್ರಸ್ಟ್‌ನ ಆಶ್ರಯದಲ್ಲಿ ಸ್ವಯಂ ಉದ್ಯೋಗ ಪ್ರಾರಂಭಿಸಲು ಬಯಸುವ ಮಹಿಳೆಯರು, ಸ್ತ್ರೀ ಶಕ್ತಿ ಸಂಘಗಳು ಹಾಗೂ ಸ್ವಸಹಾಯ ಗುಂಪುಗಳಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಫೆ. 25ರಂದು ಬೆಳಿಗ್ಗೆ 9.30ಕ್ಕೆ ಪಟ್ಟಣದ ಚನ್ನಬೆೃರೇಗೌಡ ಕ್ರೀಡಾಂಗಣದಲ್ಲಿ ಮಾಹಿತಿ ಶಿಬಿರ  ಏರ್ಪಡಿಸಲಾಗಿದೆ.

ಶಿಬಿರದಲ್ಲಿ ನಿಗಮದ ವತಿಯಿಂದ ದೊರೆಯುವ ಸಾಲ ಸೌಲಭ್ಯ, ಸಹಾಯಧನ ಹಾಗೂ ಸ್ವಯಂ ಉದ್ಯೋಗ ಕುರಿತು ಮಾಹಿತಿ ನೀಡಲಾಗುವುದು.

ಆಸಕ್ತರು ಫೆ. 23ರ ಒಳಗೆ ತಮ್ಮ ಹೆಸರನ್ನು ಎಸ್.ಎಸ್. ಆರ್. ಮ್ಯಾಚಿಂಗ್ ಸೆಂಟರ್, ಮಿಷನ್ ಆಸ್ಪತ್ರೆ ಎದುರು, ತಮ್ಮೇಗೌಡ ಬಡಾವಣೆ,  ಹೊಸಕೋಟೆ- ಇಲ್ಲಿ ನೋಂದಾಯಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಮೊ. 99457-13974  ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry