ಸೋಮವಾರ, ಜನವರಿ 20, 2020
18 °C

ಹೊಸದಾಗಿ ವಿಚಾರಣೆ ಎದುರಿಸಲಿರುವ ಸಲ್ಮಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಹನ್ನೊಂದು ವರ್ಷಗಳ ಹಿಂದೆ ನಡೆದಿದ್ದ, ಅಪಘಾತದ ನಂತರ ವಾಹನ ನಿಲ್ಲಿಸದೇ ಪರಾರಿ­ಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಈಗ ಮತ್ತೆ ಹೊಸ­ದಾಗಿ ವಿಚಾರಣೆ ಎದುರಿಸಬೇಕಾಗಿದೆ.ವಿಚಾರಣೆಯ ಮಧ್ಯದಲ್ಲಿ ಸಲ್ಮಾನ್‌ ಖಾನ್ ವಿರುದ್ಧ ಉದ್ದೇಶ­ಪೂರ್ವಕ­ವಲ್ಲದ ಮಾನವ ಹತ್ಯೆ ಆರೋಪ ಹೊರಿಸಲಾಗಿತ್ತು. ಇದಕ್ಕೆ ಸಂಬಂಧಿ ಸಿದಂತೆ ಸಾಕ್ಷಿ­ಗ­ಳನ್ನು ಸರಿಯಾಗಿ ವಿಚಾರಣೆ ನಡೆಸ­ಲಾಗಿಲ್ಲ ಎಂಬ ಕಾರಣ

ನೀಡಿ ಪ್ರಕರಣ­ವನ್ನು ಮತ್ತೆ ಹೊಸ­ದಾಗಿ ವಿಚಾರಣೆಗೆ ಒಳ­ಪಡಿಸು­ವಂತೆ ಸೆಷನ್ಸ್‌ ನ್ಯಾಯಾಲಯ ಗುರುವಾರ ಆದೇಶಿಸಿದೆ.ಹೊಸದಾಗಿ ವಿಚಾರಣೆ ನಡೆಸುವಂತೆ ಕೋರಿ ಸಲ್ಮಾನ್‌ ಖಾನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು   ನಡೆಸಿದ ನ್ಯಾಯಾಧೀಶ ಡಿ.ಡಬ್ಲ್ಯು ದೇಶಪಾಂಡೆ, ಹೊಸ ಆರೋಪಕ್ಕೆ ಸಂಬಂಧಿಸಿ­ದಂತೆ ಸಾಕ್ಷಿಗಳ ಪಾಟೀ ಸವಾಲು ನಡೆಸಲು ನಟನಿಗೆ ಅವಕಾಶ ನೀಡದೇ ಇರುವುದ­ರಿಂದ ಮತ್ತೆ ಹೊಸದಾಗಿ ವಿಚಾರಣೆ ನಡೆಯಲಿದೆ ಎಂದು ಹೇಳಿದರು.ಈ ಮೊದಲು, ನಿರ್ಲಕ್ಷ್ಯದ ಚಾಲನೆ ಮಾಡಿ ಸಾವಿಗೆ ಕಾರಣದ ಆರೋಪ­ದಲ್ಲಿ ಸಲ್ಮಾನ್‌ ಖಾನ್‌ ವಿಚಾರಣೆ ನಡೆಸಲಾಗಿತ್ತು. ಈ ಅಪರಾಧಕ್ಕೆ ಗರಿಷ್ಠ ಎರಡು ವರ್ಷ­ಗಳವರೆಗೆ ಶಿಕ್ಷೆ ನೀಡಲು ಅವಕಾಶವಿದೆ.ಒಂದು ವೇಳೆ, ಉದ್ದೇಶ­ಪೂರ್ವಕ­ವಲ್ಲದ ಹತ್ಯೆ ನಡೆಸಿದ ಆರೋಪ ಸಾಬೀತಾದರೆ ಗರಿಷ್ಠ 10 ವರ್ಷಗಳ­ವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.ಈಗಾಗಲೇ ಪ್ರಕರಣದ ವಿಚಾರಣೆಗೆ ಸಾಕಷ್ಟು ಸಮಯ ತೆಗೆದುಕೊಂಡಿ­ರುವು­ದರಿಂದ ಮುಂದಿನ ವಿಚಾರಣೆಗಳು ತ್ವರಿತವಾಗಿ ನಡೆಯಲಿವೆ ಎಂದು ನ್ಯಾಯಾಧೀಶರು ತಿಳಿಸಿದರು.ಈ ಮೊದಲು ಮ್ಯಾಜಿಸ್ಟ್ರೇಟ್‌ ಮುಂದೆ ಸಲ್ಲಿಸಲಾಗಿದ್ದ ಸಾಕ್ಷ್ಯಗಳನ್ನು ಪರಿಗಣಿಸಲಾಗುವುದಿಲ್ಲ. ಸಾಕ್ಷಿಗಳನ್ನು ಮತ್ತೆ ಹೊಸದಾಗಿ ವಿಚಾರಣೆಗೆ ಮತ್ತು ಪಾಟೀ ಸವಾಲಿಗೆ ಗುರಿಪಡಿಸಬೇಕು ಎಂದು ಹೇಳಿದ ನ್ಯಾಯಾಧೀಶರು, ವಿಚಾರಣೆ­ಯನ್ನು ಇದೇ 23ಕ್ಕೆ ಮುಂದೂಡಿ; ಪ್ರಾಸಿಕ್ಯೂಷನ್‌ ಅಂದು ಸಾಕ್ಷಿಗಳ ಪಟ್ಟಿ ಸಲ್ಲಿಸಬೇಕು ಎಂದು ಸೂಚಿಸಿದರು.

ಹೊಸದಾಗಿ ವಿಚಾರಣೆ ಆರಂಭಿಸುವ ದಿನಾಂಕವನ್ನು ನ್ಯಾಯಾಲಯ ಅದೇ ದಿನ ನಿಗದಿ ಪಡಿಸಲಿದೆ.

ಪ್ರತಿಕ್ರಿಯಿಸಿ (+)