ಹೊಸದುರ್ಗ: ಕೇಂದ್ರದ ನೀತಿ ಖಂಡಿಸಿ ಪ್ರತಿಭಟನೆ

7

ಹೊಸದುರ್ಗ: ಕೇಂದ್ರದ ನೀತಿ ಖಂಡಿಸಿ ಪ್ರತಿಭಟನೆ

Published:
Updated:

ಹೊಸದುರ್ಗ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶದ ಸಾಮರಸ್ಯವನ್ನೇ ಕದಡುವ  ಹಾಗೂ ಬಹುಸಂಖ್ಯಾತರ ದಮನ ಮಾಡುವ ವಿಧೇಯಕವನ್ನು ವಾಪಸು ಪಡೆಯಬೇಕು ಎಂದು ಅಗ್ರಹಿಸಿ ಬಿಜೆಪಿ ಯುವ ಮೊರ್ಚಾ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.ಹಿಂಸಾಚಾರ ತಡೆ ವಿಧೇಯಕವನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರನ್ನು ಇಬ್ಭಾಗ ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು  ದೂರಿದರು.ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಮುಖಂಡ ಎಸ್. ಲಿಂಗಮೂರ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯ ಆರ್. ಹನುಮಂತಪ್ಪ, ಯುವ ಮೊರ್ಚಾದ ಲಿಂಗದೇವರು, ಬೈರಸ್ವಾಮಿ. ಜಯಣ್ಣ, ದೊಡ್ಡಯ್ಯ ಮತ್ತಿತರರು ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry