ಹೊಸಪೇಟೆಯ ಮುಬೀನಾಗೆ ಎಂ.ಎ ಪ್ರಥಮ ರ‌್ಯಾಂಕ್

7

ಹೊಸಪೇಟೆಯ ಮುಬೀನಾಗೆ ಎಂ.ಎ ಪ್ರಥಮ ರ‌್ಯಾಂಕ್

Published:
Updated:
ಹೊಸಪೇಟೆಯ ಮುಬೀನಾಗೆ ಎಂ.ಎ ಪ್ರಥಮ ರ‌್ಯಾಂಕ್

 ಹೊಸಪೇಟೆ: ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಮೊದಲ ರ‌್ಯಾಂಕ್‌ನೊಂದಿಗೆ ಪಡೆಯುವಲ್ಲಿ ನಗರದ ಎಂ.ಎಸ್ ಮುಬೀನಾ ಯಶಸ್ವಿಯಾಗಿದ್ದಾರೆ.ಹೊಸಪೇಟೆ ಎಂ.ಜೆ.ನಗರ ನಿವಾಸಿ ಎಂ.ಎಸ್.ಅಮೀರುದ್ದಿನ್‌ರ ಪುತ್ರಿಯಾಗಿರುವ ಮುಬೀನಾ ಸ್ಥಳೀಯ ಎಲ್‌ಎಫ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ 8ರಂದು ಕುವೆಂಪು ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ. ಎಸ್.ಎ. ಬಾರಿಯವರಿಂದ ಪದವಿಯ ಪ್ರಮಾಣಪತ್ರ ಪಡೆದರು.ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಎಲ್‌ಎಫ್‌ಎಸ್ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸ್ಮಯೋರ್ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ವಿಜಯನಗರ ಕಾಲೇಜಿನಲ್ಲಿ ಉನ್ನತ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯ ಹಾಗೂ ವಿಜಾಪುರ ಮಹಿಳಾ ವಿಶ್ವವಿದ್ಯಾಲಯಗಳಲ್ಲಿಯು ಅಭ್ಯಾಸ ಮಾಡಿರುವ ಮುಬೀನಾ ಎಂ.ಎ. ಅರ್ಥಶಾಸ್ತ್ರವನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೊದಲ ರ‌್ಯಾಂಕ್‌ನೊಂದಿಗೆ ಪಡೆಯುವ ಮೂಲಕ ತನ್ನ ಶೈಕ್ಷಣಿಕ ಪ್ರೌಢಿಮೆಯನ್ನು ಮೆರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry