ಮಂಗಳವಾರ, ಮೇ 18, 2021
30 °C

ಹೊಸಮುಖಗಳಿಗೊಂದು ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಸುದೀಪ್ www.filmytales.com ವೆಬ್‌ಸೈಟ್ ಉದ್ಘಾಟಿಸಿದರು. `ಚಿತ್ರರಂಗ, ನಾಟಕರಂಗ, ಕಿರುತೆರೆ ಹಾಗೂ ಮಾಡೆಲಿಂಗ್ ಕ್ಷೇತ್ರಗಳಿಗೆ ಹೊಸ ಪ್ರತಿಭೆಗಳು, ಹೊಸ ಮುಖಗಳ ಅಗತ್ಯವಿದೆ. ವೆಬ್‌ಸೈಟ್ ಮೂಲಕ ಆ ಹೊಸ ಪ್ರತಿಭೆಗಳು ಹಾಗೂ ಚಿತ್ರೋದ್ಯಮದ ಬೇಡಿಕೆಗೆ ಸೇತುವೆಯಾಗಿ ಕಾರ್ಯನಿರ್ವಹಿಸುವೆವು~ ಎಂದು ಜಿ.ಅರವಿಂದ್ ವೆಬ್‌ಸೈಟ್ ಕುರಿತು ಹೇಳಿದರು.ಮೊದಲ ತಿಂಗಳು ವೆಬ್‌ಸೈಟ್‌ಗೆ ಉಚಿತವಾಗಿ ನೋಂದಣಿ ಇರುತ್ತದೆ. ಎಲ್ಲಾ ಕಲಾ ಪ್ರಕಾರದ ಕಲಾವಿದರು ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಲಾಯಿತು. ಕಿರುತೆರೆ ಕಲಾವಿದೆ ಹಂಸ, ರಾಮಕೃಷ್ಣ ಕರತೂರಿ, ಶ್ರಿನಿವಾಸ್ ಜೋಗಿ, ಸುನೀಲ್ ಪುರಾಣಿಕ್, ಶ್ರಿಕಾಂತ್ ಹೆಬ್ಳೀಕರ್, ಭವ್ಯಕಲಾ, ಸಂದೀಪ್‌ವಿಜಯ್ ಸಿಂಗ್, ನಿರ್ದೇಶಕರಾದ ಕಲಾಗಂಗೋತ್ರಿ ಮಂಜುನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.  

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.