ಹೊಸಳ್ಳಿ ಕೆರೆ ವರದಿ ನೀಡಲು ಶಾಸಕರ ಸೂಚನೆ

7

ಹೊಸಳ್ಳಿ ಕೆರೆ ವರದಿ ನೀಡಲು ಶಾಸಕರ ಸೂಚನೆ

Published:
Updated:

ಯಲ್ಲಾಪುರ: `ಕಿರವತ್ತಿ ಗ್ರಾ.ಪಂ. ವ್ಯಾಪ್ತಿಯ ಹೊಸಳ್ಳಿ ಕೆರೆಗೆ ಕೃಷ್ಣ ಡೇರಿ ಹಾಗೂ ಐಸ್‌ಕ್ರೀಂ ಕಾರ್ಖಾನೆ ತ್ಯಾಜ್ಯಗಳನ್ನು ಬಿಡಲಾಗುತ್ತಿದ್ದು, ನೀರು ಮಲೀನಗೊಂಡು ಮೀನುಗಳು ಸಾಯುತ್ತಿವೆ. ನೀರು ಕುಡಿದ ದನಕರುಗಳೂ ಅಸ್ವಸ್ಥವಾಗುತ್ತಿವೆ. ಪರಿಸರ ಮಾಲಿನ್ಯ ಹೆಚ್ಚಾಗಿದ್ದು ಜನರು ಬದುಕಲು ಕಷ್ಟವಾಗುತ್ತಿದೆ~ ಎಂದು ಆ ಭಾಗದ ಜನತೆ ಶಾಸಕ ವಿ.ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ತಾ.ಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ದೂರಿದರು.   ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದರು.ಸಭೆಯಲ್ಲಿ ವಿದ್ಯುತ್ ಅಸಮರ್ಪಕ ಪೂರೈಕೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಯಿತು. `ನಂದೊಳ್ಳಿ ಭಾಗದಲ್ಲಿ ವಿದ್ಯುತ್ ಪೂರೈಕೆಯನ್ನು ಸಮರ್ಪಕವಾಗಿ ನೀಡದಿದ್ದರೆ, ಮಳೆಗಾಲದ ಅವಧಿಯಲ್ಲಿ ವಿದ್ಯುತ್ ಪೂರೈಕೆಯನ್ನೇ ನಿಲ್ಲಿಸಿಬಿಡಿ~ ಎಂದು ನಂದೊಳ್ಳಿ ಗ್ರಾ.ಪಂ. ಸದಸ್ಯ ಶ್ರಿಧರ ಗುಮ್ಮೋನಿ ಅಸಮಾಧಾನ ವ್ಯಕ್ತಪಡಿಸಿದರು.ಮಂಚಿಕೆರೆ ಭಾಗದಲ್ಲಿ ಲೈನ್‌ಮೆನ್ ಕೊರತೆ, ವಜ್ರಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಂಚಿಮನೆ ಟಿಸಿ ಕಳೆದ ಒಂದೂವರೆ ತಿಂಗಳಿನಿಂದ ಕೆಟ್ಟು ನಿಂತಿರುವ ಸಂಗತಿಗಳು ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟವು.

ಸಾತೊಡ್ಡಿ ಫಾಲ್ಸ್ ರಸ್ತೆಯಲ್ಲಿ ಆನಗೋಡವರೆಗಿನ ರಸ್ತೆ ಕಾಮಗಾರಿ ಅರೆಬರೆಯಾಗಿದ್ದು ಮಳೆಗಾಲದೊಳಗೆ ರಸ್ತೆಗೆ ಹೊಂಡ ತುಂಬುವ ಕೆಲಸವನ್ನಾದರೂ ಮಾಡಬೇಕೆಂದು ಆನಗೋಡ ಗ್ರಾ.ಪಂ. ಅಧ್ಯಕ್ಷ ಕೆ.ಟಿ. ಹೆಗಡೆ ಆಗ್ರಹಿಸಿದರು. ಶಾಸಕರು ತುರ್ತು ದುರಸ್ಥಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 

ಬೆದೆಹಕ್ಲು-ದೇವರಕಲ್ಲಳ್ಳಿ ರಸ್ತೆ ತೇಪೆ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಆ ಭಾಗದ ಜನರು ಜಿ.ಪಂ. ಅಧಿಕಾರಿಗೆ ದೂರಿದರು.ತಾಲ್ಲೂಕಿನಲ್ಲಿ ವಿವಿಧ ರಸ್ತೆ ಅಭಿವೃದ್ಧಿಗೆ 16 ಕೋಟಿ ರೂಪಾಯಿ ಮಂಜೂರಿಯಾಗಿದೆ ಎಂದು ಹೇಳಲಾಗಿದ್ದು ಅವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ಕೆ.ಎಸ್. ಭಟ್ಟ ಆಗ್ರಹಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಪ್ರಗತಿ ಕುರಿತು ಮಾಹಿತಿ ನೀಡಿದರು. ತಾ.ಪಂ. ಅಧ್ಯಕ್ಷೆ ಗಿರಿಜಾ ಕೊಂಬೆ,ಜಿ.ಪಂ. ಸದಸ್ಯ ರಾಘವೇಂದ್ರ ಭಟ್ಟ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕೈಟ್ಕರ, ತಹಶೀಲ್ದಾರ ಎಂ.ವಿ ಕಲ್ಲೂರಮಠ, ವಿ.ಎನ್ ನಾಡಗೌಡ, ತಾ.ಪಂ. ಇಒ ಎಂ.ಎ.ಐ ಶೇಖ್,ಗ್ರಾ.ಪಂ. ಉಪಾಧ್ಯಕ್ಷರಾದ ವಿ.ಎನ್. ಭಟ್ ವಜ್ರಳ್ಳಿ, ಗುರು ಭಟ್ಟ ಹಾಸಣಗಿ ಮುಂತಾದವರಿದ್ದರು. ಎಚ್.ವಿ. ಗೌಡ ಸ್ವಾಗತಿಸಿದರು. ಯುವಜನಸೇವಾ ಕ್ರೀಡಾಧಿಕಾರಿ ಪ್ರಕಾಶ ನಾಯ್ಕ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry