ಗುರುವಾರ , ನವೆಂಬರ್ 21, 2019
25 °C
ಪಂಚರಂಗಿ

ಹೊಸ ಅವತಾರದಲ್ಲಿ ರಾಣಿ

Published:
Updated:
ಹೊಸ ಅವತಾರದಲ್ಲಿ ರಾಣಿ

ಇದುವರೆಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದಿದ್ದ ನಟಿ ರಾಣಿ ಮುಖರ್ಜಿ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಅಣಿಯಾಗಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ `ಮಾರ್ದನಿ' ಚಿತ್ರದಲ್ಲಿ ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಯಶ್ ರಾಜ್ ಫಿಲ್ಮ್ಸ್ ಜತೆ ಕೈಜೋಡಿಸಿರುವ ರಾಣಿ ಮುಖರ್ಜಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಈ ಚಿತ್ರವನ್ನು ಪ್ರದೀಪ್ ಸರ್ಕಾರ್ ನಿರ್ದೇಶಿಸಲಿದ್ದಾರೆ. ರಾಣಿ ಮತ್ತು ಸರ್ಕಾರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರ ಪ್ರೇಕ್ಷಕರಿಗೆ ಹೊಸಬಗೆಯ ಥ್ರಿಲ್ ನೀಡಲಿದೆ ಎಂಬುದು ಚಿತ್ರತಂಡದ ಅನಿಸಿಕೆ.ಅಂದಹಾಗೆ, `ಮಾರ್ದನಿ' ಚಿತ್ರದ ಚಿತ್ರೀಕರಣ ಈ ವರ್ಷದ ಕೊನೆಯಲ್ಲಿ ಪ್ರಾರಂಭಗೊಳ್ಳಲಿದೆಯಂತೆ. ಯಶ್ ರಾಜ್ ಫಿಲ್ಮ್ಸ್‌ಗಾಗಿ ಪ್ರದೀಪ್ ಸರ್ಕಾರ್ ಈ ಹಿಂದೆ `ಲಾಗಾ ಚುನರಿ ಮೇ ದಾಗ್' ಚಿತ್ರ ನಿರ್ದೇಶಿಸಿ ಕೊಟ್ಟಿದ್ದರು. ಹಾಗೆಯೇ ರಾಣಿ ಮುಖರ್ಜಿ ಇದೇ ಬ್ಯಾನರ್ ನಿರ್ಮಿಸಿದ್ದ `ದಿಲ್ ಬೋಲೆ ಹಡಿಪ್ಪಾ' ಚಿತ್ರದಲ್ಲಿ ಈ ಹಿಂದೆ ನಟಿಸಿದ್ದರು. 

ಪ್ರತಿಕ್ರಿಯಿಸಿ (+)