ಹೊಸ ಆಟಗಾರರತ್ತ ಮುಂಬೈ ಚಿತ್ತ
ಮುಂಬೈ (ಪಿಟಿಐ): ಮುಂಬೈ ಇಂಡಿಯನ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಐದನೇ ಆವೃತ್ತಿಯಲ್ಲಿ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವತ್ತ ತನ್ನ ಗುರಿಯನ್ನು ನೆಟ್ಟಿದೆ.
ಯುವ ಕ್ರಿಕೆಟಿಗರಾದ ಅಪೂರ್ವ ವಾಂಖೇಡೆ, ಸುಜಿತ್ ನಾಯಕ್, ರಾಹುಲ್ ಶುಕ್ಲಾ, ಕುಲದೀಪ್ ಯಾದವ್ ಹಾಗೂ ಸುಶಾಂತ್ ಮರಾಠೆ ಅವರು ಶನಿವಾರ ತಂಡಕ್ಕೆ ಸೇರ್ಪಡೆಯಾದರು.
ದೇಶಿಯ ಟೂರ್ನಿಗಳಲ್ಲಿ ಈ ಆಟಗಾರರು ನೀಡಿದ ಪ್ರದರ್ಶನದ ಆಧಾರದ ಮೇಲೆ ಈ ಆಯ್ಕೆ ಮಾಡಲಾಗಿದೆ ಎಂದು ತಂಡದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
19 ವರ್ಷದ ಅಪೂರ್ವ ಅತ್ಯುತ್ತಮ ಬ್ಯಾಟ್ಸ್ಮನ್. ಇದೇ ಮೊದಲ ಸಲ ತಂಡದ ಸಮವಸ್ತ್ರ ಧರಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಿದರ್ಭದ ಈ ಆಟಗಾರ ಉತ್ತಮ ತಾಂತ್ರಿಕ ಕೌಶಲ ಹಾಗೂ ವೇಗವಾಗಿ ರನ್ ಗಳಿಸುವ ಗುಣ ಹೊಂದಿದ್ದಾರೆ.
ಬರಹ ಇಷ್ಟವಾಯಿತೆ?
0
0
0
0
0