ಶನಿವಾರ, ಮೇ 8, 2021
20 °C

ಹೊಸ ಆಲೋಚನೆಯ ಪತ್ರಕರ್ತರು ಇಂದಿನ ಅಗತ್ಯ: ಮೊಹಿದ್ದೀನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕಲುಷಿತಗೊಂಡಿರುವ ಮಾಧ್ಯಮ ಕ್ಷೇತ್ರವನ್ನು ಶುದ್ಧಗೊಳಿಸುವ ಹೊಸ ಆಲೋಚನೆಯ ಪತ್ರಕರ್ತರು ಇಂದಿನ ಅಗತ್ಯವಾಗಿದ್ದಾರೆ~ ಎಂದು ಮಾಜಿ ಸಚಿವ ಬಿ.ಎಂ.ಮೊಹಿದ್ದೀನ್ ಅಭಿಪ್ರಾಯಪಟ್ಟರು.

ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಗುರುವಾರ ಪ್ರೆಸ್‌ಕ್ಲಬ್ ಪ್ರಕಾಶನ ಹೊರತಂದಿರುವ ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರ `ಮಾಧ್ಯಮ ಬ್ರಹ್ಮಾಂಡ~ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಮಾರಂಭದಲ್ಲಿ ತಮಿಳುನಾಡಿನ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಪಿ.ಸಂಜಯ್ ಮಾತನಾಡಿ, `ಹೊಸ ತಂತ್ರಜ್ಞಾನಗಳ ಬಳಕೆಯಿಂದ ದೇಶದಲ್ಲಿ ಮಾಧ್ಯಮ ಕ್ಷೇತ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ ಪತ್ರಕರ್ತರ ನೈತಿಕತೆಯ ಕುರಿತು ಎಲ್ಲಡೆ ಚರ್ಚೆಯಾಗುತ್ತಿದ್ದು, ಪತ್ರಕರ್ತರು ತಮ್ಮ ನಡತೆ ಹಾಗೂ ಉತ್ತಮ ವರದಿಯ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಬೇಕು~ ಎಂದರು. .

ಕೃತಿಯ ಲೇಖಕ ಈಶ್ವರ ದೈತೋಟ ಮಾತನಾಡಿ, `ಪತ್ರಕರ್ತರಲ್ಲಿ ಅಹಂಕಾರ ಇರಬಾರದು. ತಮ್ಮಿಂದಲೇ ಜಗತ್ತಿಗೆ ಮಾಹಿತಿ ಲಭ್ಯವಾಗುತ್ತಿದೆ ಎಂದು ತಿಳಿದಿದ್ದರೆ ಅದು ತಪ್ಪು~ ಎಂದು ಯುವ ಪತ್ರಕರ್ತರಿಗೆ ಕಿವಿಮಾತು ಹೇಳಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಪ್ರೆಸ್‌ಕ್ಲಬ್ ಕಾರ್ಯದರ್ಶಿ ಸದಾಶಿವ ಶೆಣೈ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.