ಹೊಸ ಇನಿಂಗ್ಸ್ ಕಟ್ಟಲು ತಯಾರಿ;ಉದ್ಯಾನ ನಗರಿಗೆ ಬಂದಿಳಿದ ಯುವಿ

7

ಹೊಸ ಇನಿಂಗ್ಸ್ ಕಟ್ಟಲು ತಯಾರಿ;ಉದ್ಯಾನ ನಗರಿಗೆ ಬಂದಿಳಿದ ಯುವಿ

Published:
Updated:
ಹೊಸ ಇನಿಂಗ್ಸ್ ಕಟ್ಟಲು ತಯಾರಿ;ಉದ್ಯಾನ ನಗರಿಗೆ ಬಂದಿಳಿದ ಯುವಿ

ಬೆಂಗಳೂರು: ಮತ್ತೆ ಕ್ರಿಕೆಟ್ ಅಂಗಳಕ್ಕೆ ಹಿಂತಿರುಗಲು ಕಾತರದಿಂದ ಎದುರು ನೋಡುತ್ತಿರುವ ಯುವರಾಜ್ ಸಿಂಗ್ ಭಾನುವಾರ ಸಂಜೆ ಉದ್ಯಾನ ನಗರಿಗೆ ಆಗಮಿಸಿದರು. ತಮ್ಮ ಮೊದಲಿನ ಫಿಟ್‌ನೆಸ್ ಕಂಡುಕೊಂಡಂತಿರುವ ಅವರು ಅಭಿಮಾನಿಗಳತ್ತ ಕೈಬೀಸಿ ಖುಷಿ ವ್ಯಕ್ತಪಡಿಸಿದರು.ಎಡಗೈ ಬ್ಯಾಟ್ಸ್‌ಮನ್ ಯುವಿ ಸೋಮವಾರ ಬೆಳಿಗ್ಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ತೆರಳಿ ದೈಹಿಕ ಕಸರತ್ತು ನಡೆಸಲಿದ್ದಾರೆ. ಶೀಘ್ರವೇ ಅಭ್ಯಾಸವನ್ನೂ ಶುರು ಮಾಡಲಿದ್ದಾರೆ.ಕ್ಯಾನ್ಸರ್‌ನಿಂದ ಪೂರ್ಣವಾಗಿ ಚೇತರಿಸಿಕೊಂಡಿರುವ ಅವರು ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಚುಟುಕು ವಿಶ್ವಕಪ್ ಆರಂಭವಾಗಲು ಇನ್ನು ಎರಡೂವರೆ ತಿಂಗಳಷ್ಟೆ ಬಾಕಿ ಉಳಿದಿದ್ದು ಅಷ್ಟರಲ್ಲಿ ಅವರು ತಮ್ಮ ದೈಹಿಕ ಸಾಮರ್ಥ್ಯ ಸಾಬೀತುಪಡಿಸುವುದು ಅನುಮಾನ. `ಮತ್ತೆ ಕಣಕ್ಕಿಳಿದು ಆಡುವುದು ದೊಡ್ಡ ಸವಾಲಿನ ವಿಷಯ~ ಎಂದೂ ಅವರು ಕೆಲ ದಿನಗಳ ಹಿಂದೆ ಹೇಳಿದ್ದರು. ಈ ಟೂರ್ನಿ ಶ್ರೀಲಂಕಾದಲ್ಲಿ ಸೆಪ್ಟೆಂಬರ್ 18ರಿಂದ ಅಕ್ಟೋಬರ್ ಏಳರವರೆಗೆ ನಡೆಯಲಿದೆ.ಶ್ವಾಸಕೋಶದಲ್ಲಿ ಗೆಡ್ಡೆ ಕಾಣಿಸಿಕೊಂಡ ಕಾರಣ ಏಳು ತಿಂಗಳಿನಿಂದ ಯುವರಾಜ್ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. 2011ರ ನವೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಮುಂಬೈನಲ್ಲಿ ನಡೆದ ಟೆಸ್ಟ್ ಅವರಾಡಿದ ಕೊನೆಯ ಪಂದ್ಯ. ಏಕದಿನ ಹಾಗೂ ಟ್ವೆಂಟಿ-20 ಪಂದ್ಯವಾಡಿ ವರ್ಷವೇ ಕಳೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry