ಸೋಮವಾರ, ಏಪ್ರಿಲ್ 12, 2021
23 °C

ಹೊಸ ಉನ್ನತ ಶಿಕ್ಷಣ ಮಸೂದೆ ಜಾರಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ದೇಶದ ಶಿಕ್ಷಣ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡುವ ಉನ್ನತ ಶಿಕ್ಷಣ ಮಸೂದೆ-2011ರ ಜಾರಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಹಿಂ ಪಡೆಯಬೇಕು ಎಂದು ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಎಸ್. ಮಿಟ್ಟಲ ಕೋಡ್ ಒತ್ತಾಯಿಸಿದರು.ಸ್ಥಳೀಯ ವಕೀಲರ ಸಂಘದ ಕಚೇರಿ ಯಲ್ಲಿ  ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಉನ್ನತ ಶಿಕ್ಷಣ ಮಸೂದೆ- 2011ರಲ್ಲಿ ಕಾನೂನು ವಿಷಯ ಸೇರಿದಂತೆ 13 ಕೋರ್ಸ್‌ಗಳು ಒಳಗೊಳ್ಳು ತ್ತವೆ. ಈ ಮಸೂದೆಯನ್ನು ಜಾರಿ ಮಾಡುವುದರಿಂದ ವಿದೇಶೀ ಶಿಕ್ಷಣ ಸಂಸ್ಥೆಗಳು ದೇಶದೊಳಗೆ ಕಾಲಿ ಡಲು ಹೆಬ್ಬಾಗಿಲು ತೆರೆದಂತಾಗುತ್ತದೆ.

 

ಒಂದು ವೇಳೆ  ಮಸೂದೆ ಜಾರಿ ಯಾದರೆ ದೇಶೀಯ ಸಂಸ್ಥೆಗಳಿಗೆ ಬಹಳ ಧಕ್ಕೆ ಎದುರಾಗಲಿದೆ. ವಿದೇಶದ ದೈತ್ಯ ಸಂಸ್ಥೆಗಳು ತಮಗೆ ತೋಚಿದಂತೆ ಶಿಕ್ಷಣ ವ್ಯವಸ್ಥೆ ರೂಪಿಸುತ್ತವೆ. ಇದರಿಂದಾಗಿ ದೇಶದ ಮಕ್ಕಳು ಬಲವಂತದ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ನಿರ್ಮಾಣ ಆಗುತ್ತದೆ ಎಂದರು.ಅದರಂತೆ ಹೊಸ ವಾಹನ ಅಪ ಘಾತ ವಿಮೆ ಮಸೂದೆಯನ್ನು ಜಾರಿಗೆ ತರಲು ನಿರ್ಧರಿಸಿರುವ ಕ್ರಮ ಖಂಡ ನೀಯ. ಹೊಸ ಮಸೂದೆ ಜಾರಿಗೆ ಬಂದರೆ ಅಪಘಾತದಲ್ಲಿ ಅನಾ ಹುತಕ್ಕೆ ಈಡಾದವರಿಗೆ ಕೇವಲ 50 ಸಾವಿರ ರೂಪಾಯಿ ಮಾತ್ರ ಪರಿಹಾರ ನೀಡುವ ಕಡ್ಡಾಯ ಇದೆ. ಈ ಮಸೂದೆ ಜಾರಿ ಆಗುವುದರಿಂದ ವಿದೇಶಿ ವಿಮಾ ಕಂಪೆನಿಗಳು ದೇಶಕ್ಕೆ ಲಗ್ಗೆ ಇಡಬಹು ದಾಗಿದೆ.ಇದರಿಂದಾಗಿ ಸ್ವದೇಶಿ ವಿಮಾ ಕಂಪೆನಿಗಳು ಕಷ್ಟಕ್ಕೆ ಸಿಲುಕವ ಭಯ ಇದೆ. ಆದ್ದರಿಂದ ಎರಡೂ ಮಸೂದೆ ಜಾರಿ ಖಂಡಿಸಿ ಇದೇ 11 ಮತ್ತು 12ರಂದು ವಕೀಲರ ಸಂಘದ ವತಿ ಯಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಅವರು ಹೇಳಿದ ಅವರು ಈ ಬಗ್ಗೆ ಸಾರ್ವಜನಿಕರು ಹೊಸ ಮಸೂದೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಹಿರಿಯ ವಕೀಲರಾದ ಸಿ.ಬಿ. ನರಸಮ್ಮನವರ, ಎಸ್.ಪಿ. ಬಳಿಗಾರ, ವಿ.ಎಲ್. ಪೂಜಾರ, ಎಂ. ಎಂ. ಬಮ್ಮನಕಟ್ಟಿ ಸೇರಿದಂತೆ ಮತ್ತಿತ ರರು ಹಾಜರಿದ್ದರು.ವಿ.ಎಸ್. ಪಶುಪತಿಹಾಳ ಸ್ವಾಗತಿಸಿ ದರು. ಬಿ.ಎಸ್. ಬಾಳೇಶ್ವರಮಠ ನಿರೂಪಿಸಿದರು. ವೈ.ಬಿ. ಉಮಚಗಿ ವಂದಿಸಿದರು. ಇದೇ ಸಂದರ್ಭದಲ್ಲಿ ಹೃದಯ ಚಿಕಿತ್ಸೆಗೆ ಒಳಗಾದ ಹಿರಿಯ ವಕೀಲ ಎ.ಎಂ. ಮಡಿವಾಳರ ಅವರಿಗೆ 50 ಸಾವಿರ ರೂಪಾಯಿಗಳ ಪರಿಹಾರದ ಚೆಕ್‌ನ್ನು ವಕೀಲರ ಪರಿಷತ್ ವತಿಯಿಂದ ನೀಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.