ಹೊಸ ಎತ್ತರಕ್ಕೆ ಮ್ಯೋನೇಜ್‌ಮೆಂಟ್ ಉತ್ಸವ

7

ಹೊಸ ಎತ್ತರಕ್ಕೆ ಮ್ಯೋನೇಜ್‌ಮೆಂಟ್ ಉತ್ಸವ

Published:
Updated:
ಹೊಸ ಎತ್ತರಕ್ಕೆ ಮ್ಯೋನೇಜ್‌ಮೆಂಟ್ ಉತ್ಸವ

ಐಬಿಎಸ್ ಬೆಂಗಳೂರು ಆಯೋಜಿಸುವ ಅತ್ಯಂತ ಜನಪ್ರಿಯ ಅಂತರ ಕಾಲೇಜು ಉತ್ಸವ `ತರ್ಕಶ್ 2012  ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ದಕ್ಷಿಣ ಭಾರತದ ನೂರಾರು ಮ್ಯೋನೇಜ್‌ಮೆಂಟ್ ಪದವೀಧರರು ವಿವಿಧ ಸ್ಪರ್ಧೆಗಳಲ್ಲಿ ಮುಂಚೂಣಿಯ ಸ್ಥಾನ ಪಡೆಯಲು ಹಣಾಹಣಿ ನಡೆಸಿದರು.ತರ್ಕಶ್ 2012 ಉದಯೋನ್ಮುಖ ಮ್ಯೋನೇಜರ್‌ಗಳಿಗೆ ಅವರು ಇತರರಿಗಿಂತ ತಾವೇ ಹೇಗೆ ಉತ್ತಮ ಎಂದು ಸಾಬೀತುಪಡಿಸಲು ತರ್ಕಶ್2012 ವೇದಿಕೆ ಸಷ್ಟಿಸಿತ್ತು.

ತರ್ಕಶ್ ಎಂದರೆ `ಆಕಾಶದೆತ್ತರ~ ಎಂದರ್ಥ.   ಬಿ-ಸ್ಕೂಲ್ ವಿದ್ಯಾರ್ಥಿಗಳು ನೈಜ ಪ್ರಕರಣ ಮತ್ತು ಆಟಗಳ ಮೂಲಕ ಮ್ಯೋನೇಜ್‌ಮೆಂಟ್ ಸವಾಲುಗಳನ್ನು ಎದುರಿಸುತ್ತಾರೆ.

 

ಈ ವರ್ಷದ ವಸ್ತು `ಹೌಸ್ ಆಫ್ ಕಾರ್ಡ್ಸ್  ಕಾರ್ಪೊರೇಟ್ ಆಟಗಳನ್ನು ಕೇಂದ್ರೀಕರಿಸಿತ್ತು.

ಇಸ್ಪೀಟು ಎಲೆಗಳಂತೆ ಯಶಸ್ಸು ದೊರೆಯುವವರೆಗೂ ಯಾರು ಗೆಲ್ಲುತ್ತಾರೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಫಲಿತಾಂಶ  ಯಶಸ್ಸನ್ನು ನಿರ್ಧರಿಸುತ್ತದೆ. ಅದೃಷ್ಟ, ಛಲ, ಪರಿಶ್ರಮ ಎಲ್ಲದರ ಮೇಳಗಳಂತಿದ್ದವು ಈ ಆಟಗಳು.ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಚುರುಕಾಗಿ ಯೋಚಿಸಿ, ತ್ವರಿತ ನಿರ್ಧಾರ ಕೈಗೊಳ್ಳುವ ಚಾಣಾಕ್ಷ್ಯತನವನ್ನು ಬೆಳೆಸಲು ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.   ವಿದ್ಯಾರ್ಥಿಗಳು 4000ಕ್ಕೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿ  ಅಂತರ್‌ದಷ್ಟಿ ಪ್ರತಿಷ್ಠಾನ ಕ್ಕೆ ನೀಡಿದರು.  ಜವಾಬ್ದಾರಿಯೊಂದಿಗೆ ನಡೆಸಬೇಕೆನ್ನುವುದನ್ನು ಕಲಿತರು.ಇದರೊಂದಿಗೆ ತರ್ಕಶ್ 2012 ಹಣಕಾಸು, ಮಾರಾಟ, ಮಾನವ ಸಂಪನ್ಮೂಲಗಳು, ನಿರ್ವಹಣೆ, ಐಟಿ, ವಹಿವಾಟು ಯೋಜನೆ, ಬ್ಯುಸಿನೆಸ್ ಕ್ವಿಜ್‌ ಮತ್ತು ಬ್ಯುಸಿನೆಸ್ ಮ್ಯೋನೇಜರ್ ಈ ರೀತಿಯ ಎಂಟು ಇತರೆ ವಿಭಾಗಗಳನ್ನು ಹೊಂದಿತ್ತು.

ದೇಶದ 15 ಕಾಲೇಜುಗಳನ್ನು ಪ್ರತಿನಿಧಿಸುವ 62 ತಂಡಗಳು ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯ ತಂಡ ಸಮಗ್ರ ವಿಜಯಿ ತಂಡವಾಗಿದ್ದು ಅವರಿಗೆ ರೋಲಿಂಗ್ ಟ್ರೋಫಿ ನೀಡಲಾಯಿತು. ಅ ಐಬಿಎಸ್ ಹೈದರಾಬಾದ್‌ನ ಶ್ರೀ ಅಮಿತ್ ಅತ್ಯುತ್ತಮ ಮ್ಯೋನೇಜರ್ ಎನಿಸಿದರು.ಜ. 27ರಂದು ಈ ಉತ್ಸವವನ್ನು ಕಾಗ್ನಿಝೆಂಟ್ ಟೆಕ್ನಾಲಜೀಸ್‌ನ ಸಹ ನಿರ್ದೇಶಕ ಶ್ರೀ ರಂಗ ಕಡಂಬಿ ಉದ್ಘಾಟಿಸಿದರು. ಐಬಿಎಸ್ ಬೆಂಗಳೂರಿನ ನಿರ್ದೇಶಕಿ ಡಾ.ಲತಾ ಚಕ್ರವರ್ತಿ ವಿವಿಧ ಮ್ಯೋನೇಜ್‌ಮೆಂಟ್ ಶಿಕ್ಷಣ ಸಂಸ್ಥೆಯ 132 ಮಂದಿ ಭಾಗವಹಿಸಿದವರನ್ನು ಸ್ವಾಗತಿಸಿ ಶುಭ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry