ಹೊಸ ಕಂಪನಿ ಕಾಯ್ದೆ ಮುಂದಿನ ವರ್ಷ ಜಾರಿ

ಶನಿವಾರ, ಮೇ 25, 2019
22 °C

ಹೊಸ ಕಂಪನಿ ಕಾಯ್ದೆ ಮುಂದಿನ ವರ್ಷ ಜಾರಿ

Published:
Updated:

ಮುಂಬೈ (ಪಿಟಿಐ): ಹೊಸ ಕಂಪನಿ ಕಾಯ್ದೆಯು ಮುಂದಿನ ವರ್ಷ ಜಾರಿಗೆ ಬರಲಿದೆ ಎಂದು ಕೇಂದ್ರ ಕಂಪನಿ ವ್ಯವಹಾರ ಸಚಿವ ವೀರಪ್ಪ ಮೊಯಿಲಿ ತಿಳಿಸಿದ್ದಾರೆ.ಸಂಸತ್ತಿನ ಸ್ಥಾಯಿ ಸಮಿತಿಯ ಶಿಫಾರಸಿನ ಮೇರೆಗೆ ತಮ್ಮ ಸಚಿವಾಲಯವು `ಕಂಪನಿ ಮಸೂದೆ 2009~ಯಲ್ಲಿ ಹಲವಾರು ಬದಲಾವಣೆ ತರಲು ಮುಂದಾಗಿದೆ. ಸ್ಥಾಯಿ ಸಮಿತಿಯು ಸೂಚಿಸಿರುವ 300 ತಿದ್ದುಪಡಿಗಳಿಗೆ ಅನುಗುಣವಾಗಿ ಹೊಸ ಮಸೂದೆ ಸಿದ್ಧಪಡಿಸಲಾಗುತ್ತಿದೆ ಎಂದು ಮೊಯಿಲಿ ತಿಳಿಸಿದರು.ಹೊಸ ಮಸೂದೆಗೆ ಕೇಂದ್ರ ಸಚಿವ ಸಂಪುಟದಿಂದ ಆದಷ್ಟು ಬೇಗ ಸಮ್ಮತಿ ಪಡೆದು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು. ಉದ್ದಿಮೆ ಸಂಸ್ಥೆಗಳ ಆಡಳಿತ ನಿರ್ವಹಣೆಯಲ್ಲಿ ಹೊಸ ಮಸೂದೆಯು ಗಮನಾರ್ಹ ಸುಧಾರಣೆ ತರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry