ಶನಿವಾರ, ಮೇ 21, 2022
22 °C

ಹೊಸ ಗ್ರಾಹಕ ದರ ಶ್ರೇಣಿ 18ರಂದು ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕ ತತ್ತರಿಸಿರುವ ಹಿನ್ನೆಲೆಯಲ್ಲಿ ಹೊಸ ಗ್ರಾಹಕ ದರ ಶ್ರೇಣಿಯನ್ನು ಫೆಬ್ರುವರಿ 18ರಂದು ಪ್ರಕಟಿಸವುದಾಗಿ ಸರ್ಕಾರ ಹೇಳಿದೆ.ನಗರ, ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಿಗೆ ಪ್ರತ್ಯೇಕ ದರ ಶ್ರೇಣಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.  ಇದು ಮುಂದಿನ ಒಂದು ವರ್ಷಗಳ ಕಾಲ ಜಾರಿಯಲ್ಲಿರಲಿದೆ. ಪ್ರಮುಖ ಐದು ಸರಕು ಗುಂಪುಗಳಾದ ಆಹಾರ, ಪಾನೀಯ, ತಂಬಾಕು, ಇಂಧನ, ಗೃಹ, ಪಾದರಕ್ಷೆ, ಬಟ್ಟೆಗಳಿಗೆ ಪರಿಷ್ಕೃತ ದರ ಅನ್ವಯಿಸಲಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ದರ ಶ್ರೇಣಿ ಜಾರಿಗೊಳ್ಳಲಿದೆ. ಇದರ ಜತೆಗೆ ಸರ್ಕಾರ ನಾಲ್ಕು ಗ್ರಾಹಕ ದರ ಸೂಚ್ಯಂಕ (ಸಿಪಿಐ) ಪ್ರಕಟಿಸಿದೆ. ಕೈಗಾರಿಕಾ, ಕೃಷಿ ಹಾಗೂ ಗ್ರಾಮೀಣ ಕಾರ್ಮಿಕರಿಗೆ ಮತ್ತು ನಗರ ಪ್ರದೇಶದ ಉದ್ಯೋಗಿಗಳಿಗಾಗಿ ಗ್ರಾಹಕ ಸೂಚ್ಯಂಕ ದರ ನಿಗದಿಪಡಿಸಲಾಗಿದೆ.‘ಸದ್ಯ ಜಾರಿಯಲ್ಲಿರುವ ಗ್ರಾಹಕ ದರ ಶ್ರೇಣಿಯಲ್ಲಿ ಹಲವು ನ್ಯೂನತೆಗಳಿವೆ. ಇದು ದೇಶದಲ್ಲಿರುವ ಒಟ್ಟಾರೆ ನೈಜ ದರ ವ್ಯತ್ಯಾಸವನ್ನು ಬಿಂಬಿಸುತ್ತಿಲ್ಲ’ ಎಂದು ಹಿರಿಯ ಅಂಕಿಅಂಶ ತಜ್ಞ ಟಿ.ಸಿ.ಎ ಅನಂತ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.